ಬೆಂಗಳೂರು: ತಮ್ಮ ವಿರುದ್ಧದ ರಾಸಲೀಲೆ ಸಿಡಿ ಪ್ರಕರಣದ ವಿರುದ್ಧ ದೂರು ನೀಡಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಾಗಿದ್ದು, ಸೋಮವಾರ ಕಂಪ್ಲೇಂಟ್ ದಾಖಲಿಸಲು ನಿರ್ಧರಿಸಿದ್ದಾರೆ.
ಸಿಡಿ ಪ್ರಕರಣ ಬೆಳಕಿಗೆ ಬಂದು ಈಗಾಗಲೇ 10 ದಿನಗಳಾಗಿದ್ದು, ಈವರೆಗೂ ರಮೇಶ್ ಜಾರಕಿಹೊಳಿ ದೂರು ದಾಖಲಿಸಿರಲಿಲ್ಲ. ಇದೀಗ ಕಾನೂನು ಸಲಹೆಗಳನ್ನು ಪಡೆದು ಸೋಮವಾರ ದೂರು ನೀಡಲು ನಿರ್ಧರಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆ: ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ಗೀತಾ ಶಿವರಾಜ್ ಕುಮಾರ್
ಇನ್ನು ದೂರಿನಲ್ಲಿ ಮೂವರು ಪ್ರಭಾವಿ ನಾಯಕರ ಹೆಸರನ್ನು ಉಲ್ಲೇಖಿಸಲಿದ್ದಾರೆ ಎಂದು ತಿಳಿದುಬಂದಿದೆ. ರಮೇಶ್ ಜಾರಕಿಹೊಳಿ ನೀಡುವ ದೂರಿನ ಆಧಾರದ ಮೇಲೆ ಎಸ್ಐಟಿ ತನಿಖೆ ನಡೆಸಲಿದ್ದು, ಯಾವೆಲ್ಲ ಪ್ರಭಾವಿಗಳ ಹೆಸರು ಸಿಡಿ ಪ್ರಕರಣದಲ್ಲಿ ಹೊರಬರಲಿದೆ ಎಂಬುದನ್ನು ಕಾದುನೋಡಬೇಕಿದೆ.