ಜೈಲು ಅಂದ್ರೆ ನರಕ ಎಂಬ ಮಾತಿದೆ. ಆದ್ರೆ ಕೆಲ ಜೈಲುಗಳಲ್ಲಿ ಕೈದಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತದೆ. ಕೈದಿಗಳನ್ನು ಮೃಗಗಳಂತೆ ನೋಡುವ ಜೈಲೊಂದು ಉತ್ತರ ಕೊರಿಯಾದಲ್ಲಿದೆ. ಇಲ್ಲಿನ ಯೋಡೋಕ್ ಕಾನ್ಸಂಟ್ರೇಶನ್ ಕ್ಯಾಂಪ್ ವಿಶ್ವದ ಅತ್ಯಂತ ಅಪಾಯಕಾರಿ ಜೈಲಾಗಿದೆ.
ಈ ಜೈಲಿನಿಂದ ತಪ್ಪಿಸಿಕೊಂಡು ಬಂದ ಕೈದಿಗಳು ಅಲ್ಲಿನ ಕರಾಳ ಕಥೆಯನ್ನು ಹೇಳುತ್ತಾರೆ. ವಿಶ್ವಸಂಸ್ಥೆಯ ವಿಚಾರಣಾ ಆಯೋಗ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ನ ವರದಿಗಳು ಕೈದಿಗಳ ಮೇಲೆ ಮಾಡಿದ ಭೀಕರ ಚಿತ್ರಹಿಂಸೆಗಳನ್ನು ವಿವರಿಸಿವೆ. ಈ ಜೈಲಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಗರ್ಭಪಾತ ನಡೆಯುತ್ತವೆ ಎಂಬುದು ಬಹಿರಂಗವಾಗಿದೆ.
ಕೈದಿಗಳಿಗೆ ಕಠಿಣ ಕೆಲಸಗಳನ್ನು ನೀಡಲಾಗುತ್ತದೆ. ಕೈದಿಗಳಿಗೆ ದಿನಕ್ಕೆ 18-18 ಗಂಟೆಗಳ ಕಾಲ ಕೆಲಸ ನೀಡಲಾಗುತ್ತದೆ. ಕಾಡಿನಿಂದ ಬೃಹತ್ ಮರವನ್ನು ಕಡಿದು ತರಬೇಕು. ಈ ಜೈಲಿನ ಸುತ್ತಲೂ ಸೈನಿಕರು ಬಂದೂಕುಗಳನ್ನು ಹಿಡಿದು ತಿರುಗುತ್ತಿರುತ್ತಾರೆ. ನಾಯಿಗಳ ಕಾವಲಿರುತ್ತದೆ. ತಪ್ಪಿಸಿಕೊಳ್ಳಲು ಯತ್ನಿಸಿದ್ರೆ ಸಾವು ನಿಶ್ಚಿತ.
ಸರಿಯಾದ ಬಟ್ಟೆಯನ್ನು ಕೈದಿಗಳಿಗೆ ನೀಡುವುದಿಲ್ಲ. ಅನಾರೋಗ್ಯಕ್ಕೊಳಗಾದ್ರೆ ಔಷಧಿ ನೀಡುವುದಿಲ್ಲ. ಸರಿಯಾಗಿ ಊಟವನ್ನೂ ನೀಡುವುದಿಲ್ಲ. ವಿದೇಶಿ ಕೈದಿಗಳ ಸ್ಥಿತಿ ಮತ್ತಷ್ಟು ದುಃಸ್ಥರವಾಗಿರುತ್ತದೆ. ವಿದೇಶಿ ಕೈದಿಗಳಿಗೆ 180 ಗ್ರಾಂ ಜೋಳ ನೀಡಲಾಗುತ್ತದೆ. ಹಸಿವಾಗಿದೆ ಎಂದ್ರೆ ವಿದೇಶಿ ಕೈದಿಗಳಿಗೆ ತಿನ್ನಲು ಜೀವಂತ ಹಾವು ಮತ್ತು ಇಲಿಯನ್ನು ನೀಡುತ್ತಾರೆ. ಉತ್ತರ ಕೊರಿಯಾ ಸರ್ಕಾರದ ವಿರುದ್ಧ ಮಾತನಾಡಿದ ಅಥವಾ ಅದನ್ನು ವಿರೋಧಿಸುತ್ತಾರೆಂಬ ಅನುಮಾನ ಬಂದವರನ್ನು ಈ ಜೈಲಿಗೆ ಕಳುಹಿಸಲಾಗುತ್ತದೆ.