alex Certify Shocking: ಲಸಿಕೆಯ ಎರಡು ಡೋಸ್ ಪಡೆದ ಬಳಿಕವೂ ಕೊರೊನಾ ಸೋಂಕಿಗೊಳಗಾದ ಜಿಲ್ಲಾಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಲಸಿಕೆಯ ಎರಡು ಡೋಸ್ ಪಡೆದ ಬಳಿಕವೂ ಕೊರೊನಾ ಸೋಂಕಿಗೊಳಗಾದ ಜಿಲ್ಲಾಧಿಕಾರಿ

ಕೊರೊನಾ ಲಸಿಕೆಯ ಎರಡೂ ಡೋಸ್​ಗಳನ್ನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಸೋಂಕಿಗೆ ಒಳಗಾದ ಘಟನೆ ಛತ್ತೀಸ್ಘಡದ ರಾಯ್ಪುರದಲ್ಲಿ ನಡೆದಿದೆ. ಈ ಘಟನೆ ಬಳಿಕ ಕೊರೊನಾ ಲಸಿಕೆಯ ಸಾಮರ್ಥ್ಯದ ಮೇಲೆ ಮತ್ತೊಮ್ಮೆ ಸಂಶಯ ಹುಟ್ಟುವಂತೆ ಆಗಿದೆ.

ಜಂಜ್ಗೀರ್​ – ಚಂಪಾ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್​ ಕುಮಾರ್​ಗೆ ಕೊರೊನಾ ಪಾಸಿಟಿವ್​ ವರದಿ ಬಂದಿದೆ. ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ಸಬಂಧ ಯಶವಂತ್​ ಮಾಹಿತಿಯನ್ನ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ ಜೊತೆ ಸಂಪರ್ಕಕ್ಕೆ ಬಂದವರು ಎಚ್ಚರದಿಂದ ಇರಿ ಎಂದು ಟ್ವಿಟರ್​ ಮೂಲಕ ಯಶವಂತ್​ ಮನವಿ ಮಾಡಿದ್ದಾರೆ.

ಆದರೆ ವಿಚಿತ್ರ ಅಂದರೆ, ಕಳೆದ ವಾರವಷ್ಟೇ ಯಶವಂತ್​ ಕುಮಾರ್​ ಕೊರೊನಾ ಲಸಿಕೆಯ ಕೊನೆಯ ಡೋಸ್​ನ್ನು ಪಡೆದಿದ್ದರು. ಆದರೆ ಇದೀಗ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಯಾವುದೇ ರೋಗ ಗುಣಲಕ್ಷಣಗಳನ್ನ ಯಶವಂತ್​ ಕುಮಾರ್​ ಹೊಂದಿಲ್ಲ.

ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಯಶವಂತ್​ ಕುಮಾರ್​​ ಫೆಬ್ರವರಿ 8ನೇ ತಾರೀಖಿನಂದು ತಮ್ಮ ಮೊದಲನೇ ಡೋಸ್​ನ್ನು ಸ್ವೀಕರಿಸಿದ್ದರು. ಇದಾದ ಬಳಿಕ ಮಾರ್ಚ್​ 8ನೇ ತಾರೀಖಿನಂದು ಎರಡನೇ ಡೋಸ್​ನ್ನು ಪಡೆದಿದ್ದಾರೆ. ಇದಾದ ಬಳಿಕ ನಡೆಸಲಾದ ಆರ್​​ಟಿ – ಪಿಸಿಆರ್​ ಟೆಸ್ಟ್​ನಲ್ಲಿ ಯಶವಂತ್​ ಕುಮಾರ್​ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಯಶವಂತ್​ ಕುಮಾರ್​ ಸೋಂಕಿಗೆ ಒಳಗಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್​ ಬಂದಿದೆ. ಕುಮಾರ್​ ಇದೀಗ ಹೋಂ ಐಸೋಲೇಷನ್​ನಲ್ಲಿ ಇದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...