ಫಿಲಡೆಲ್ಫಿಯಾ ಬಳಿಕ ಶ್ವೆಂಕ್ಸ್‌ವಿಲ್ಲೆಯ ಸ್ಕಿಪ್ಪಾಕ್ ಫಾರ್ಮಸಿಯ ಕೌಂಟರ್ ಬಳಿ ಮಾಲೀಕ ಮಯಾಂಕ್ ಅಮಿನ್ ತಡರಾತ್ರಿವರೆಗೂ ಕೆಲಸ ಮಾಡುತ್ತಾ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆಗಳನ್ನು ಹಾಕಲು ಶ್ರಮಿಸುತ್ತಿದ್ದಾರೆ.
ಕಳೆದ ಜನವರಿಯಿಂದ ಈ ಹೊಣೆಗಾರಿಕೆ ಹೊತ್ತುಕೊಂಡಿರುವ ಮಯಾಂಕ್, ಡಾ. ಮ್ಯಾಕ್ ಎಂದೇ ಖ್ಯಾತರಾಗಿದ್ದು, ಲಸಿಕೆ ಹಾಕಲೆಂದೇ ಕ್ಲಿನಿಕ್ ಒಂದನ್ನು ಆರಂಭಿಸಿದ್ದು, ಪ್ರತಿನಿತ್ಯವೂ ಸಾವಿರಾರು ಮಂದಿಗೆ ಇಂಜೆಕ್ಷನ್ ಹಾಕುತ್ತಿದ್ದಾರೆ.
ಅಸ್ಟ್ರಾಜೆಂಕಾ ‘ಲಸಿಕೆ’ ಬಳಕೆಗೆ ತಡೆಯೊಡ್ಡಿದ ಮತ್ತೊಂದು ದೇಶ
ಇದೀಗ ಸೂಪರ್‌ಮ್ಯಾನ್ ಕಾಸ್ಟ್ಯೂಮ್‌ಧಾರಿಯಾಗಿರುವ ಅಮಿನ್, ಹೆಪ್ಪುಗಟ್ಟುವ ವಾತಾವರಣದಲ್ಲೂ ಸಹ ತಮ್ಮೂರಿನ ಬೀದಿಬೀದಿಗಳಲ್ಲಿ ಸಾಗಿ ಜನರಿಗೆ ಕೋವಿಡ್-19 ಲಸಿಕೆ ಹಾಕುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಲಸಿಕೆಯ ಪೂರೈಕೆಗಳು ಸಿಕ್ಕ ಬಳಿಕ ಈ ಫಾರ್ಮಸಿಸ್ಟ್ ಇದಕ್ಕೆಂದೇ ಅನೇಕ ಕ್ಲಿನಿಕ್‌ಗಳನ್ನು ನಡೆಸುತ್ತಾ ಬಂದಿದ್ದಾರೆ.
ತಮ್ಮ ಗರ್ಭಿಣಿ ಪತ್ನಿಯನ್ನು ವಾರಾಂತ್ಯದಲ್ಲಿ ಸೇರಿಕೊಳ್ಳುವ ಅಮಿನ್, ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. “ನನ್ನ ಮಗು ಭೂಮಿಗೆ ಬರುವ ಮುನ್ನ ನಮ್ಮ ಎಲ್ಲ ಜನರಿಗೂ ಲಸಿಕೆ ಹಾಕುವುದು ಖಾತ್ರಿಯಾಗಲಿ ಎಂದು ಇಚ್ಛಿಸುತ್ತೇನೆ. ಇದು ನನ್ನ ಕನಸು” ಎನ್ನುತ್ತಾರೆ ಅಮಿನ್.