ಏಷ್ಯಾದ ಎರಡನೇ ಅತಿ ದೊಡ್ಡ ಜೀವವೈವಿಧ್ಯಧಾಮವಾದ ಒಡಿಶಾ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವು ಕಳೆದ ಎರಡು ವಾರಗಳಿಂದ ಕಾಳ್ಗಿಚ್ಚಿನ ಕೆನ್ನಾಲಗೆಗೆ ತುತ್ತಾಗಿ ಸುದ್ದಿಯಲ್ಲಿತ್ತು. ಅದೃಷ್ಟವಶಾತ್ ಪಿತಾಭಾಟಾ ಪ್ರದೇಶದಲ್ಲಿ ಮಳೆ ಹಾಗೂ ಮಾರುತಗಳ ನೆರವಿನಿಂದ ಕಾಳ್ಗಿಚ್ಚನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇದೆಲ್ಲದರ ನಡುವೆ ಕಾಳ್ಗಿಚ್ಚನ್ನು ನಂದಿಸುವ ಕಾಯಕದಲ್ಲಿ ನಿರತರಾಗಿದ್ದ ಮಹಿಳಾ ಅರಣ್ಯಾಧಿಕಾರಿಯೊಬ್ಬರು ಮಳೆ ಬರುತ್ತಲೇ ಸಂತಸದಿಂದ ಕುಣಿದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಪ್ರಾರ್ಥನೆಯನ್ನು ಕೇಳಿಸಿಕೊಂಡು ಅರಣ್ಯದ ಉಳಿವಿಗೆ ಬಂದ ಮಳೆರಾಯನಿಗೆ ಧನ್ಯವಾದ ಹೇಳಲು ಈಕೆ ಹೀಗೆ ಖುಷಿಯಿಂದ ಕುಣಿದಾಡಿದ್ದಾರೆ ಎನ್ನಲಾಗಿದೆ.
ಕಾಮದ ಮದದಲ್ಲಿ ನಾಚಿಕೆಗೇಡು ಕೃತ್ಯ: ಬಸ್ ನಿಲ್ದಾಣದಲ್ಲೇ ಭಿಕ್ಷುಕಿ ಮೇಲೆ ಅತ್ಯಾಚಾರ
“ಇಂಥ ಮಳೆ ದೇವರು ಚಾಚಿದ ನೆರವಿನ ಹಸ್ತ” ಎಂದು ಭಾರತೀಯ ಅರಣ್ಯ ಸೇವೆ ಅಧಿಕಾರಿ ರಮೇಶ್ ಪಾಂಡೆ ತಮ್ಮ ಪೋಸ್ಟ್ನ ಕ್ಯಾಪ್ಷನ್ನಲ್ಲಿ ತಿಳಿಸಿದ್ದು, ಸದ್ಯದ ಮಟ್ಟಿಗೆ ಕಾಳ್ಗಿಚ್ಚು ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.
https://twitter.com/lopamohanty/status/1369844423970889729?ref_src=twsrc%5Etfw%7Ctwcamp%5Etweetembed%7Ctwterm%5E1369844423970889729%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwoman-forest-officer-dances-in-joy-as-rain-showers-over-similipal-after-forest-fire-viral-1778106-2021-03-11