ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ, ಖಾಸಗಿ ಆಸ್ಪತ್ರೆಗಳಲ್ಲಿ 1 ಡೋಸ್ ಗೆ 250 ರೂ. ದರ ನಿಗದಿ ಮಾಡಲಾಗಿದೆ.
ಕೊರೋನಾ ಲಸಿಕೆ ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಕೊರೋನಾ ಲಸಿಕೆ ದರ ಇಳಿಕೆಯಾಗಲಿದ್ದು ಒಂದು ಡೋಸ್ ಗೆ 157 ನಿಗದಿ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಒಂದು ದೋಸ್ತ್ ಲಸಿಕೆಗೆ 210 ದರ ನಿಗದಿಯಾಗಿದೆ. ಇದನ್ನು ತೆರಿಗೆ ಸೇರಿಸಿ 157.50 ರೂಪಾಯಿಗೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪನಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆಗೆ ಕೇಂದ್ರ ಸರ್ಕಾರ ಈ ಕುರಿತಾಗಿ ಚರ್ಚೆ ನಡೆಸಿದೆ. ಆರೋಗ್ಯ ಮಂತ್ರಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಬಗ್ಗೆ ಮಾಹಿತಿ ನೀಡಿದ್ದು, ದರ ಏರಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಒಪ್ಪಿದರೆ ಜನಸಾಮಾನ್ಯರಿಗೆ 157.5 ಸಾವಿರ ರೂಪಾಯಿಯಲ್ಲಿ ಲಸಿಕೆ ಸಿಗಲಿದೆ. ಲಸಿಕೆಗೆ 150 ರೂ. ಇದ್ದು, ಜಿಎಸ್ಟಿ ಸೇರಿ 157.50 ರೂಪಾಯಿ ಆಗುತ್ತದೆ ಎಂದು ಹೇಳಲಾಗಿದೆ.