ನೌಕರರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಖಾತೆ ಶುರು ಮಾಡಿದೆ. ಉದ್ಯೋಗಿಗಳಿಗೆ ಅನೇಕ ವಿಶೇಷ ಸೌಲಭ್ಯಗಳನ್ನು ನೀಡ್ತಿದೆ. ಈ ಖಾತೆಗೆ ಪಿಎನ್ಬಿ ಮೈಸ್ಯಾಲರಿ ಖಾತೆ ಎಂದು ಹೆಸರಿಡಲಾಗಿದೆ. ಈ ಖಾತೆಯನ್ನು ಸಿಲ್ವರ್, ಗೋಲ್ಡ್, ಪ್ರೀಮಿಯಂ ಮತ್ತು ಪ್ಲಾಟಿನಂ ಎಂದು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ನೌಕರರನ್ನು ವೇತನದ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದ್ರಲ್ಲಿ 20 ಲಕ್ಷ ರೂಪಾಯಿಗಳವರೆಗೆ ಉಚಿತ ವಿಮೆ ಕೂಡ ಸಿಗಲಿದೆ.
ತಿಂಗಳಿಗೆ 10 ಸಾವಿರದಿಂದ 25 ಸಾವಿರ ಸಂಬಳ ಪಡೆಯುವವರನ್ನು ಸಿಲ್ವರ್ ವಿಭಾಗಕ್ಕೆ ಸೇರಿಸಲಾಗಿದೆ. ಗೋಲ್ಡ್ ವಿಭಾಗದಲ್ಲಿ 25000 ರೂಪಾಯಿಯಿಂದ 75000 ಸಂಬಳ ಪಡೆಯುವ ನೌಕರರು ಸೇರುತ್ತಾರೆ. 75001 ರೂಪಾಯಿಯಿಂದ 150000 ರೂಪಾಯಿವರೆಗಿನವರನ್ನು ಪ್ರೀಮಿಯಂ ವಿಭಾಗದಲ್ಲಿ ಇರಿಸಲಾಗಿದೆ. 150001 ರೂಪಾಯಿಗಿಂತ ಹೆಚ್ಚಿನ ಸಂಬಳ ಹೊಂದಿರುವವರನ್ನು ಪ್ಲಾಟಿನಂ ವಿಭಾಗದಲ್ಲಿ ಇರಿಸಲಾಗಿದೆ.
Good News: ಭಾರತದಲ್ಲಿ ಶೀಘ್ರದಲ್ಲೇ ಶುರುವಾಗಲಿದೆ ಐಫೋನ್ ಉತ್ಪಾದನಾ ಘಟಕ
ಪಿಎನ್ಬಿ ಟ್ವಿಟರ್ ನಲ್ಲಿ ಈ ಖಾತೆ ಬಗ್ಗೆ ಮಾಹಿತಿ ನೀಡಿದೆ. ಪಿಎನ್ಬಿ ಮೈಸ್ಯಾಲರಿ ಖಾತೆಯಲ್ಲಿ ವೈಯಕ್ತಿಕ ಅಪಘಾತ ವಿಮೆಯೊಂದಿಗೆ ಓವರ್ಡ್ರಾಫ್ಟ್ ಮತ್ತು ಸ್ವೀಪ್ ಸೌಲಭ್ಯ ಸಿಗಲಿದೆ ಎಂದು ಬ್ಯಾಂಕ್ ಹೇಳಿದೆ. ಝೀರೋ ಬ್ಯಾಲೆನ್ಸ್ ನೊಂದಿಗೆ ಈ ಖಾತೆಯನ್ನು ತೆರೆಯಬಹುದು. ಸಿಲ್ವರ್ ವಿಭಾಗದವರಿಗೆ 50 ಸಾವಿರ ರೂಪಾಯಿವರೆಗೆ ಓವರ್ಡ್ರಾಫ್ಟ್ ಸೌಲಭ್ಯ ಸಿಗಲಿದೆ. ಇದಲ್ಲದೆ ಗೋಲ್ಡ್ ವಿಭಾಗದ ನೌಕರರಿಗೆ 1,50,000 ರೂಪಾಯಿ ಹಾಗೂ ಪ್ರೀಮಿಯಂ ವಿಭಾಗದವರಿಗೆ 2,25,000 ರೂಪಾಯಿ ಮತ್ತು ಪ್ಲಾಟಿನಂ ವಿಭಾಗದವರಿಗೆ 3,00,000 ರೂಪಾಯಿ ಓವರ್ಡ್ರಾಫ್ಟ್ ಸೌಲಭ್ಯ ಸಿಗಲಿದೆ.