ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀರಾಬೆನ್ ಗೆ ಗುರುವಾರ ಕೊರೊನಾ ಮೊದಲ ಡೋಸ್ ಹಾಕಲಾಗಿದೆ. ನರೇಂದ್ರ ಮೋದಿ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಹಾಗೆ ದೇಶದ ಜನತೆಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ನನ್ನ ತಾಯಿ ಇಂದು ಕೊರೊನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ ಎಂಬುದನ್ನು ಹೇಳಲು ಖುಷಿಯಾಗುತ್ತದೆ. ಅರ್ಹರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಬೇರೆಯವರನ್ನು ಪ್ರೋತ್ಸಾಹಿಸಿ ಮತ್ತು ಸಹಾಯ ಮಾಡಿ ಎಂದು ಮೋದಿ ವಿನಂತಿಸಿಕೊಂಡಿದ್ದಾರೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ – ಮಹಾರಾಷ್ಟ್ರದ ನಾಗ್ಪುರದಲ್ಲಿ ಮತ್ತೆ ʼಲಾಕ್ ಡೌನ್ʼ ಜಾರಿ
ಪ್ರಧಾನಿ ಮೋದಿ, ಮಾರ್ಚ್ 1 ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲು ಮಾರ್ಚ್ 1ರಂದು ಅನುಮತಿ ಸಿಕ್ಕಿದೆ. ಇದಲ್ಲದೆ ಕೆಲ ರೋಗಗಳಿಗೆ ತುತ್ತಾಗಿರುವ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಅವರು ಖಾಯಿಲೆ ಇರುವ ಬಗ್ಗೆ ದಾಖಲೆ ನೀಡಬೇಕಾಗುತ್ತದೆ. ಜನವರಿ 16ರಂದು ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ.