ಹಸುಗೂಸಾಗಿದ್ದಾಗಲೇ ಉತ್ತರ ಕ್ಯಾರೋಲಿನಾದಲ್ಲಿ ದತ್ತು ಮಗುವಾಗಿ ಬೆಳೆದ 63 ವರ್ಷದ ಮಹಿಳೆಯೊಬ್ಬರು ತನ್ನ ನಿಜವಾದ ತಂದೆಯನ್ನ ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ ಈಕೆ ನಿಜವಾದ ತಂದೆ ಯಾರೆಂದು ತಿಳಿದ ಬಳಿಕ ಶಾಕ್ಗೊಳಗಾಗಿದ್ದಾರೆ.
2017ರಲ್ಲಿ ಕ್ಯಾಂಥಿ ಗಿಲ್ಕ್ರಿಸ್ಟ್ ಡಿಎನ್ಎ ಪರೀಕ್ಷೆಗೆ ಒಳಗಾಗಿದ್ದು ಇದರಲ್ಲಿ ಈಕೆಯ ತಂದೆ ರಾಷ್ಟ್ರೀಯ ತನಿಖಾ ದಳಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
1976ರಲ್ಲಿ ತನ್ನ ತಾಯಿ, ಪತ್ನಿ ಹಾಗೂ ಮೂವರು ಗಂಡು ಮಕ್ಕಳನ್ನ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ತನಿಖಾ ದಳದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.
ಗಿಲ್ಕ್ರಿಸ್ಟ್ ಮೊದಲು ತನ್ನ ಮೂರನೇ ಸೋದರ ಸಂಬಂಧಿ ಸುಸಾನ್ ಗಿಲ್ಮೋರ್ ಎಂಬವರನ್ನ ಪತ್ತೆ ಮಾಡಿದ್ದಾಳೆ. ಡಿಎನ್ಎ ಪರೀಕ್ಷೆಗೆ ಅರ್ಜಿ ತುಂಬುವ ವೇಳೆಯಲ್ಲಿ ಈಕೆ ತನ್ನ ಕುಟುಂಬಸ್ಥರನ್ನ ಹುಡುಕುತ್ತಾ ಇರೋದಾಗಿ ಹೇಳಿದ್ದಾಳೆ.
ತಾಯಿಯ ಕಡೆಯಿಂದ ಗಿಲ್ಮೋರ್ರನ್ನ ಹುಡುಕಿದ್ದು ಈಕೆಗೆ ತಂದೆಯನ್ನ ಹುಡುಕುವ ಮಾರ್ಗವನ್ನ ಸರಾಗ ಮಾಡಿತು. ಇದಾದ ಬಳಿಕ ಕೈಗೊಳ್ಳಲಾದ ಡಿಎನ್ಎ ಪರೀಕ್ಷೆಯಲ್ಲಿ ಗಿಲ್ಕ್ರಿಸ್ಟ್ ತಂದೆ ಯಾರೆಂದು ತಿಳಿದು ಬಂದಿದೆ.
ಗಿಲ್ಕ್ರಿಸ್ಟ್ ಜೈವಿಕ ತಂದೆ 84 ವರ್ಷದ ವಿಲಿಯಂ ಬ್ರಾಡ್ಬೋರ್ಡ್ ಬಿಷಪ್ ಜ್ಯೂನಿಯರ್ ಕುಟುಂಬಸ್ಥರನ್ನೇ ಕೊಲೆ ಮಾಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಂದೆ ಈ ರೀತಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.