
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 3-1 ಅಂತರದಲ್ಲಿ ಸರಣಿ ಜಯ ಸಾಧಿಸಿರುವ ಟೀಂ ಇಂಡಿಯಾ ಸದ್ಯ ಗೆಲುವಿನ ಖುಷಿಯಲ್ಲಿ ತೇಲುತ್ತಿದೆ. ಕೋವಿಡ್ 19 ಸಂಕಷ್ಟದ ಅವಧಿಯ ಬಳಿಕ ಕ್ರಿಕೆಟ್ ಜರ್ನಿ ಆರಂಭವಾದಾಗಿನಿಂದ ಟೀಂ ಇಂಡಿಯಾ ಉತ್ತಮ ಪ್ರದರ್ಶನವನ್ನ ನೀಡುತ್ತಲೇ ಬಂದಿದೆ.
ಇದೀಗ ನಾಳೆಯಿಂದ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿ ವಿಜಯದ ಮೇಲೆ ಟೀಂ ಇಂಡಿಯಾ ಕಣ್ಣಿಟ್ಟಿದೆ. ಇಯಾನ್ ಮಾರ್ಗನ್ ನೇತೃತ್ವದ ಟೀಂ ವಿರುದ್ಧ ಕೊಹ್ಲಿ ಪಡೆ ಒಟ್ಟು 5 ಟಿ 20 ಪಂದ್ಯಗಳನ್ನ ಆಡಲಿದೆ. ಎರಡೂ ತಂಡಗಳ ನಡುವಿನ ಮೊದಲ ಪಂದ್ಯ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತದಲ್ಲಿ ಶೀಘ್ರದಲ್ಲೇ ಶುರುವಾಗಲಿದೆ ಐಫೋನ್ ಉತ್ಪಾದನಾ ಘಟಕ
ಟಿ 20 ಜರ್ನಿಯಲ್ಲಿ ಒಟ್ಟು 2928 ರನ್ಗಳನ್ನ ಕಲೆ ಹಾಕಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ.
ಅಲ್ಲದೇ ಈ ಸರಣಿಯ ಮೂಲಕ ಟಿ 20 ಇತಿಹಾಸದಲ್ಲೇ ಮೊದಲ ಬಾರಿಗೆ 3000 ರನ್ಗಳನ್ನ ಸೇರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ತಯಾರಿ ನಡೆಸಿದ್ದಾರೆ.
ಟಿ 20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿರುವ ವಿಶ್ವದ ಟಾಪ್ 5 ಕ್ರಿಕೆಟಿಗರು
ವಿರಾಟ್ ಕೊಹ್ಲಿ – 2,928
ರೋಹಿತ್ ಶರ್ಮಾ – 2,839
ಮಾರ್ಟಿನ್ ಗಪ್ಟಿಲ್ – 2,346
ಶೋಯೆಬ್ ಮಲ್ಲಿಕ್ – 2,335
ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಒಂದು ವೇಳೆ 72 ರನ್ಗಳನ್ನ ಗಳಿಸುವಲ್ಲಿ ವಿಫಲರಾಗಿ ಕೊಹ್ಲಿ ಈ ಅವಕಾಶದಿಂದ ವಂಚಿತರಾದರೂ ಸಹ ಸಂಪೂರ್ಣ ಸರಣಿ ಮುಗಿಯುವಷ್ಟರಲ್ಲಂತೂ ಕೊಹ್ಲಿ 3000 ರನ್ ಕಲೆ ಹಾಕಲಿದ್ದಾರೆ ಅನ್ನೋದು ಕ್ರಿಕೆಟ್ ತಜ್ಞರ ಮಾತಾಗಿದೆ.