ನಾಗರಿಕರೊಬ್ಬರು ತಮ್ಮ ಬಳಿ ಕೇಳಿದ ಮುಗ್ಧ ಪ್ರಶ್ನೆಯೊಂದಕ್ಕೆ ಬಹಳ ಸೆನ್ಸಿಬಲ್ ಪ್ರತಿಯುತ್ತರ ಕೊಟ್ಟ ಪುಣೆ ಪೊಲೀಸ್ ಆಯುಕ್ತರ ಪ್ರೌಢಿಮೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ.
ತನ್ನ ಪ್ರೇಮನಿವೇದನೆಯನ್ನು ಒಪ್ಪಿಕೊಳ್ಳಲು ಸ್ನೇಹಿತೆಗೆ ಮನವೊಲಿಸಲು ನೆರವಾಗಲು ಕೋರಿ ಪುಣೆ ಪೊಲೀಸ್ ಆಯುಕ್ತ ಅಮಿತಾಭ್ ಗುಪ್ತಾರನ್ನು ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ಹಮ್ಮಿಕೊಂಡಿದ್ದ #LetsTalkCPPuneCity ಅಭಿಯಾನದ ವೇಳೆ ಕೇಳಿಕೊಂಡಿದ್ದಾರೆ.
ಆಸ್ತಿ ನೋಂದಣಿ ಮಾಡಿಸುವವರಿಗೆ ಬಿಗ್ ಶಾಕ್: ಸರ್ವರ್ ಪ್ರಾಬ್ಲಂನಿಂದ ಭಾರಿ ಸಮಸ್ಯೆ
ಇದಕ್ಕೆ ವಿವೇಚನಾತ್ಮಕವಾಗಿ ಪ್ರತಿಕ್ರಿಯಿಸಿದ ಆಯುಕ್ತರು, “ದುರದೃಷ್ಟವಶಾತ್, ಆಕೆಯ ಒಪ್ಪಿಗೆ ಇಲ್ಲದೇ, ನಾವೂ ಸಹ ಈ ವಿಚಾರದಲ್ಲಿ ಅಸಹಾಯಕರು. ನೀವೂ ಸಹ ಆಕೆಯ ಇಚ್ಛೆಯ ವಿರುದ್ಧ ಏನೋ ಮಾಡಲು ಆಗುವುದಿಲ್ಲ. ಒಂದು ವೇಳೆ ಹುಡುಗಿಗೆ ನಿಮ್ಮ ಪ್ರಪೋಸಲ್ ಒಪ್ಪಿಗೆಯಾದಲ್ಲಿ, ನಮ್ಮ ಕಡೆಯಿಂದ ಬೆಸ್ಟ್ ವಿಶಸ್ ಸದಾ ಇರಲಿದೆ” ಎಂದು ‘#ANoMeansNo’ ಟ್ಯಾಗ್ನೊಂದಿ ಪ್ರತಿಕ್ರಿಯಿಸಿದ್ದಾರೆ.