alex Certify BIG NEWS: ಮುಂಬೈ ಉದ್ಯಾನದಲ್ಲಿ ಕಾಣಿಸಿಕೊಂಡ ನಿಗೂಢ ಏಕಶಿಲಾಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂಬೈ ಉದ್ಯಾನದಲ್ಲಿ ಕಾಣಿಸಿಕೊಂಡ ನಿಗೂಢ ಏಕಶಿಲಾಕೃತಿ

2020ರಲ್ಲಿ ಜಗತ್ತಿನ ಅನೇಕ ಕಡೆಗಳಲ್ಲಿ ಲೋಹದ ಏಕಶಿಲಾಕೃತಿಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆಯೇ ನಾಪತ್ತೆಯೂ ಆದ ಘಟನೆಗಳು ಅನೇಕ ಬಾರಿ ವರದಿಯಾಗಿವೆ.

ಡಿಸೆಂಬರ್‌ 2020ರಲ್ಲಿ ಭಾರತದಲ್ಲೂ ಸಹ ಈ ನಿಗೂಢ ವಸ್ತುಗಳು ಕಾಣಿಸಿಕೊಂಡಿದ್ದವು. ಅಹಮದಾಬಾದ್‌ನ ತಾಲ್ಟೇಜ್‌ನ ಸಿಂಫೋನಿ ವನೋದ್ಯಾನದಲ್ಲಿ ಕಾಣಿಸಿಕೊಂಡಿದ್ದ ಈ ಏಕಶಿಲಾಕೃತಿಯು ತ್ರಿಭುಜಾಕೃತಿಯಲ್ಲಿದ್ದು, ಹೊಳೆಯುವ ಲೋಹದ ಶೀಟ್‌ಗಳನ್ನು ಹೊಂದಿತ್ತು. ಅದರ ಮೇಲೆ ಅನೇಕ ಸಂಖ್ಯೆಗಳನ್ನು ಕೆತ್ತಲಾಗಿತ್ತು.

ಕಾಣಿಸಿಕೊಂಡ ಎರಡೇ ವಾರಗಳಲ್ಲಿ ಈ ಶಿಲಾಕೃತಿ ನಾಪತ್ತೆಯಾಗಿತ್ತು.

ಇದೀಗ ಮುಂಬಯಿಯ ಬಾಂದ್ರಾದ ಜಾಗರ್ಸ್ ಉದ್ಯಾನದಲ್ಲಿ ಇಂಥದ್ದೇ ಮತ್ತೊಂದು ಆಕೃತಿ ಕಾಣಿಸಿಕೊಂಡಿದೆ. ಬುಧವಾರದಂದು ಉದ್ಯಾನದ ನಡುವಿನಲ್ಲೇ ಈ ಕಲಾಕೃತಿ ಕಾಣಿಸಿಕೊಂಡಿದ್ದು, ಬಾಂದ್ರಾ ಕಾರ್ಪೋರೇಟರ್‌ ಆಸಿಫ್‌ ಝಕಾರಿಯಾ ಈ ಏಕಶಿಲಾಕೃತಿಯ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಶಿಲಾಕೃತಿಯಲ್ಲೂ ಸಹ ಸಂಖ್ಯೆಗಳನ್ನು ಕೆತ್ತಲಾಗಿರುವುದನ್ನು ನೋಡಬಹುದಾಗಿದೆ.

— Asif Zakaria (@Asif_Zakaria) March 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...