ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದ್ರಿಂದ ಗೃಹ ಸಾಲಗಳು, ವಾಹನ ಸಾಲಗಳು ದುಬಾರಿಯಾಗಿವೆ.
ಮಾಹಿತಿಯ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲ ದರವನ್ನು ಶೇಕಡಾ 0.10ರಷ್ಟು ಹೆಚ್ಚಿಸಿ, ಬಡ್ಡಿ ದರವನ್ನು ಶೇಕಡಾ 7.40 ಕ್ಕೆ ನಿಗದಿಪಡಿಸಿದೆ. ಪ್ರೈಮ್ ಸಾಲ ದರವನ್ನು ಬ್ಯಾಂಕ್ ಶೇಕಡಾ 0.10 ರಷ್ಟು ಹೆಚ್ಚಿಸಿ, ಬಡ್ಡಿ ದರವನ್ನು ಶೇಕಡಾ 12.15 ಕ್ಕೆ ಏರಿಸಿದೆ.
KPSC SDA ಪರೀಕ್ಷೆ ಮುಂದೂಡಿಕೆ
ಬ್ಯಾಂಕ್ ಎಂಸಿಎಲ್ಆರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಸ್ಬಿಐ ಅನೇಕ ದಿನಗಳ ನಂತ್ರ ಬಡ್ಡಿದರಗಳನ್ನು ಹೆಚ್ಚಿಸಿದೆ. ಈ ಹಿಂದೆ ಎಸ್ಬಿಐ ಬಡ್ಡಿದರಗಳನ್ನು ಕಡಿತಗೊಳಿಸಿತ್ತು. ಮೂಲ ದರದಲ್ಲಿ ಸಾಲ ಪಡೆದ ಗ್ರಾಹಕರ ಸಾಲ ದುಬಾರಿಯಾಗಲಿದೆ. ರೆಪೋ ಲಿಂಕ್ ಮೂಲಕ ಸಾಲ ಪಡೆದವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.