ಋತುಚಕ್ರದ ಅವಧಿಯಲ್ಲಿ ಅಥವಾ ಅದಕ್ಕೂ ಮುನ್ನಾದಿನಗಳಲ್ಲಿ ಮಾನಸಿಕ ಕಿರಿಕಿರಿ ಹಾಗೂ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇವುಗಳಿಂದ ಮುಕ್ತಿ ಪಡೆಯುವ ದಾರಿ ಇಲ್ಲಿದೆ ಕೇಳಿ
ಮುಟ್ಟಿನ ದಿನಗಳಲ್ಲಿ ಯೋಗ ಹಾಗೂ ವ್ಯಾಯಾಮಗಳನ್ನು ಮಾಡದಿರುವುದು ಒಳ್ಳೆಯದು. ಕೆಲವು ಸೂಕ್ಷ್ಮ ದೇಹಿಗಳಿಗೆ ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಮೂರರಿಂದ ನಾಲ್ಕು ದಿನ ನಿಮ್ಮ ವರ್ಕೌಟ್ ಗೆ ವಿರಾಮ ಹೇಳಿ.
ಸಾಧ್ಯವಾದಷ್ಟು ಮನೆಯಲ್ಲೇ ಇರಿ. ಹೊರಗೆ ಹೋಗುವುದು ಅನಿವಾರ್ಯವಿದ್ದರೆ ಮಾತ್ರ ಹೋಗಿ. ಇಷ್ಟವಾದ ಪುಸ್ತಕ ಓದಿ. ಸಂಗೀತ ಕೇಳಿ. ಸ್ವಿಮ್ಮಿಂಗ್ ಕ್ಲಾಸ್ ಹೋಗುವವರಾದರೆ ಅದಕ್ಕೂ ವಿರಾಮ ಹಾಕಿ.
ಬಾಯಿರುಚಿ ತಣಿಸುವ ‘ಮ್ಯಾಕ್ರೋನಿ ಸಲಾಡ್’
ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸ್ಯಾನಿಟರಿ ಪ್ಯಾಡ್ ಬದಲಾಯಿಸಿ. ಬೆಳಗ್ಗೆ ಹಾಗು ರಾತ್ರಿ ಮಲಗುವ ಮುನ್ನ ಸ್ನಾನ ಮಾಡಿ. ಹಾಲು, ನೀರು, ಹಣ್ಣು ಧಾರಾಳವಾಗಿ ಸೇವಿಸಿ.
ತಿಂಗಳ ರಜೆಯ ಈ ಅವಧಿಯಲ್ಲಿ ಜಂಕ್ ಫುಡ್ ಗಳಿಂದ ದೂರವಿರಿ. ಇಂಥ ಆಹಾರಗಳು ನಿಮ್ಮ ಹೊಟ್ಟೆ ನೋವಿನ ಇಲ್ಲವೇ ಇತರ ಕಿರಿಕಿರಿಗಳ ಪ್ರಮಾಣವನ್ನು ಹೆಚ್ಚಿಸಬಹುದು. ಹಾಗಾಗಿ ಎಚ್ಚರದಿಂದಿರಿ.