ಮದುವೆಯಾದ ಮೊದಲ ವರ್ಷ ಇರುವ ಉತ್ಸಾಹ ನಂತ್ರದ ವರ್ಷದಲ್ಲಿ ಇರುವುದಿಲ್ಲ. ಲೈಂಗಿಕ ಜೀವನದ ಮೇಲೂ ಇದು ಪ್ರಭಾವ ಬೀರುತ್ತದೆ. ಆರಂಭದ ದಿನಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಲು ಉತ್ಸುಕರಾಗುವ ದಂಪತಿ ದಿನ ಕಳೆದಂತೆ ರುಚಿ ಕಳೆದುಕೊಳ್ತಾರೆ. ಭಾರತೀಯ ದಂಪತಿ ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ.
ಪರಸ್ಪರ ಆಕರ್ಷಣೆ ಕಡಿಮೆಯಾಗುವುದು ಇದಕ್ಕೆ ಕಾರಣ. ಆರಂಭದಲ್ಲಿದ್ದ ಆಕರ್ಷಣೆ ನಿಧಾನವಾಗಿ ಕಡಿಮೆಯಾಗುತ್ತದೆ. ಇದಕ್ಕೆ ಅನಾರೋಗ್ಯ, ತೂಕ ಹೆಚ್ಚಳ, ಕೆಲಸ ಸೇರಿದಂತೆ ಅನೇಕ ಸಂಗತಿ ಕಾರಣವಾಗುತ್ತದೆ.
ಅನೇಕ ದಂಪತಿ ಸೆಕ್ಸ್ ಲೈಫ್ ಹಾಳಾಗಲು ಮಕ್ಕಳ ಪಾಲನೆ ಕಾರಣ ಎನ್ನುತ್ತಾರೆ. ಇಡೀ ದಿನ ಮಕ್ಕಳ ಪಾಲನೆಯಲ್ಲಿ ಸಮಯ ಕಳೆಯುತ್ತದೆ. ರಾತ್ರಿ ಮಕ್ಕಳನ್ನು ಮಲಗಿಸುವುದು ಸವಾಲಿನ ಕೆಲಸ. ಈ ಒತ್ತಡದಲ್ಲಿ ಲೈಂಗಿಕ ಜೀವನದ ಮೇಲೆ ಆಸಕ್ತಿ ಕಡಿಮೆಯಾಗ್ತಿದೆ ಎಂದು ಕೆಲವರು ಹೇಳಿದ್ದಾರೆ. ಇಬ್ಬರ ಮಧ್ಯೆ ಪ್ರೀತಿ ಇರುತ್ತದೆ. ಆದ್ರೆ ಶಾರೀರಿಕ ಸಂಬಂಧವಿರುವುದಿಲ್ಲ. ಇದು ಕೆಲವೊಮ್ಮೆ ಅಸಮಾಧಾನವಾಗುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಅನಾರೋಗ್ಯದ ಕಾರಣ ಕೆಲವರು ಮಾತ್ರೆ ಸೇವನೆ ಮಾಡುತ್ತಾರೆ. ಈ ಮಾತ್ರೆಗಳು ಲೈಂಗಿಕ ಜೀವನದ ಆಸಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಕೆಲ ದಂಪತಿ ಹೇಳಿದ್ದಾರೆ.
ಸಾಮಾನ್ಯವಾಗಿ 40 ವರ್ಷದ ನಂತ್ರ ಮಹಿಳೆಯರು ಇದ್ರಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಹಾರ್ಮೋನ್ ಬದಲಾವಣೆಯಿಂದ ಅಥವಾ ವೈಯಕ್ತಿಕ ಕಾರಣಗಳಿಂದ ಪತಿಯಿಂದ ದೂರ ಮಲಗಲು ಬಯಸ್ತಾರೆ.
35ರ ಗಡಿ ದಾಟುತ್ತಿದ್ದಂತೆ ಪುರುಷರು ಕೆಲಸದಲ್ಲಿ ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಬಯಸುತ್ತಾರೆ. ಸದಾ ಕೆಲಸದ ಬಗ್ಗೆ ಆಲೋಚನೆ ಮಾಡುವ ಪುರುಷರು ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವುದುಂಟು. ಅವರ ಕೆಲಸ ಮಹಿಳೆಯರನ್ನು ಬದಲಿಸುತ್ತದೆ. ಪತಿ ಮೇಲಿನ ಪ್ರೀತಿಯನ್ನು ಕೆಲ ಮಹಿಳೆಯರು ಕಳೆದುಕೊಳ್ತಾರೆ. ವಿಚ್ಛೇದನ ನೀಡಿ ಹೊರ ನಡೆಯುವ ಬದಲು ಮಕ್ಕಳ ತಂದೆಯಾಗಿರಲು ಮಾತ್ರ ಪತಿಗೆ ಅವಕಾಶ ನೀಡುತ್ತಾರೆ. ವಿಶೇಷವೆಂದ್ರೆ ಪತ್ನಿಯರ ಈ ನಡೆಯನ್ನು ಕೆಲ ಪುರುಷರು ಸ್ವಾಗತಿಸುತ್ತಾರೆ.