alex Certify ಕೇವಲ 7 ರೂ. ಖರ್ಚಿನಲ್ಲಿ 100 ಕಿ.ಮೀ ಸಂಚರಿಸುತ್ತೆ ಈ ಸ್ಮಾರ್ಟ್​ ಬೈಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 7 ರೂ. ಖರ್ಚಿನಲ್ಲಿ 100 ಕಿ.ಮೀ ಸಂಚರಿಸುತ್ತೆ ಈ ಸ್ಮಾರ್ಟ್​ ಬೈಕ್​..!

ಪೆಟ್ರೋಲ್​ – ಡೀಸೆಲ್​ ದರ ಏರಿಕೆ ಕಾಣುತ್ತಲೇ ಇರೋದು ಶ್ರೀಸಾಮಾನ್ಯನ ನಿದ್ದೆಗೆಡಿಸಿದೆ. ಹೀಗಾಗಿ ಜನರು ಪೆಟ್ರೋಲ್​ – ಡೀಸೆಲ್​ ಬಳಕೆ ಕಡಿಮೆ ಮಾಡಲು ಪರ್ಯಾಯ ಮಾರ್ಗಗಳನ್ನ ಹುಡುಕುತ್ತಾ ಇದ್ದಾರೆ.

ಇದೇ ಸಮಯದಲ್ಲಿ ಮಾರುಕಟ್ಟೆಗೆ ಹೊಸ ಬೈಕ್​ ಒಂದು ಕಾಲಿಟ್ಟಿದೆ. ಈ ಬೈಕ್​​ನಲ್ಲಿ ನೀವು ಕೇವಲ 7 ರೂಪಾಯಿ ಖರ್ಚು ಮಾಡಿ 100 ಕಿಲೋಮೀಟರ್​ ಪ್ರಯಾಣ ಮಾಡಬಹುದಾಗಿದೆ.

ಆಟೋಮೊಬೈಲ್​ ಪ್ರೈವೇಟ್​ ಲಿಮಿಟೆಡ್​ ಕಂಪನಿ ಆಟಮ್​ 1.0 ಎಂಬ ಹೊಸ ಬೈಕ್​ನ್ನ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಬೈಕ್​ ಬಗ್ಗೆ ಅದ್ಭುತ ಭರವಸೆ ನೀಡಿರುವ ಕಂಪನಿ ಇದು ಕೇವಲ 7 ರೂಪಾಯಿ ವೆಚ್ಚದಲ್ಲಿ 100 ಕಿಲೋಮೀಟರ್​ವರೆಗೆ ಸಂಚರಿಸಲಿದೆ ಎಂದು ಹೇಳಿದೆ.

ಹೈದರಾಬಾದ್​ನ ಆಟೋಮೊಬೈಲ್​ ಪ್ರೈವೇಟ್​ ಲಿಮಿಟೆಡ್​ ಕಂಪನಿ ಈ ಬೈಕ್​ನ್ನು ತಯಾರಿಸಿದೆ.
ಇದೊಂದು ಎಲೆಕ್ಟ್ರಿಕ್​ ಬೈಕ್​ ಆಗಿದ್ದು, ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಫುಲ್ ಚಾರ್ಜ್ ಆಗಲಿದೆ. ಒಂದು ಬಾರಿ ಬ್ಯಾಟರಿ ಸಂಪೂರ್ಣ ಚಾರ್ಜ್ ಆದ ಬಳಿಕ ನೀವು 100 ಕಿಮೀವರೆಗೆ ಪ್ರಯಾಣ ಮಾಡಬಹುದಾಗಿದೆ. ಬೈಕ್​ನ ಬ್ಯಾಟರಿಗೆ ಕಂಪನಿಗೆ 24 ತಿಂಗಳ ವಾರಂಟಿ ನೀಡಿದೆ. ಈ ಬೈಕ್​ಗೆ ಈಗಾಗಲೇ 400 ಕ್ಕೂ ಹೆಚ್ಚು ಮಂದಿ ಬುಕ್ಕಿಂಗ್​ ಮಾಡಿದ್ದಾರೆ.

ಈ ಬೈಕ್​ನ ಬೆಲೆ 50 ಸಾವಿರ ರೂಪಾಯಿ ಎಂದು ಕಂಪನಿ ಹೇಳಿದೆ. ಈ ಬೈಕ್​ನ ಇನ್ನೊಂದು ವಿಶೇಷತೆ ಅಂದರೆ ಇದು ಸಂಪೂರ್ಣ ಭಾರತದಲ್ಲೇ ತಯಾರಾದ ವಾಹನವಾಗಿದೆ. ಈ ಬೈಕ್​ನಲ್ಲಿ ಡಿಜಿಟಲ್​ ಡಿಸ್​ಪ್ಲೇ, ಎಲ್​ಇಡಿ ಹೆಡ್​ಲೈಟ್​, ಟೇಲ್​ ಲೈಟ್​, ಇಂಡಿಕೇಟರ್​ ಹಾಗೂ ಸೀಟ್​ಗಳಿದೆ. ಇದೊಂದು ಸ್ಮಾರ್ಟ್​ ಬೈಕ್​ ಆಗಿದ್ದು ನಿಮ್ಮ ಮೊಬೈಲ್​ ಜೊತೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...