ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಉಡುಗೊರೆಯನ್ನು ನೀಡಿದೆ. ಮಹಿಳೆಯರನ್ನು ಮನೆ ಖರೀದಿಗೆ ಪ್ರೋತ್ಸಾಹಿಸಲು ಗೃಹ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುವುದಾಗಿ ಬ್ಯಾಂಕ್ ಹೇಳಿದೆ. ಮಹಿಳಾ ಸಾಲಗಾರರಿಗೆ ಹೆಚ್ಚುವರಿ 5 ಬಿಪಿಎಸ್ ರಿಯಾಯತಿ ನೀಡುವುದಾಗಿ ಬ್ಯಾಂಕ್ ಹೇಳಿದೆ.
ಎಸ್ಬಿಐ ಗೃಹ ಸಾಲಕ್ಕೆ ಶೇಕಡಾ 6.70ರಷ್ಟು ಬಡ್ಡಿ ವಿಧಿಸುತ್ತಿದೆ. ಯಾವುದೇ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತಿಲ್ಲ. ಸ್ಟೇಟ್ ಬ್ಯಾಂಕ್ ಮಾರ್ಚ್ 31 ರವರೆಗೆ ಎಲ್ಲಾ ರೀತಿಯ ಗೃಹ ಸಾಲಗಳಿಗೆ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದೆ. ಮಹಿಳೆಯರು ಯೋನೋ ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಿದರೆ ಅವರಿಗೆ ಹೆಚ್ಚುವರಿ ಶೇಕಡಾ 0.05 ರಿಯಾಯಿತಿ ಸಿಗಲಿದೆ.
ಸದ್ಯ ಅನೇಕ ಬ್ಯಾಂಕ್ ಗಳು ಗೃಹ ಸಾಲಕ್ಕೆ ಹೆಚ್ಚಿನ ಒತ್ತು ನೀಡ್ತಿವೆ. ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆ ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಗೃಹ ಸಾಲದ ಬಡ್ಡಿ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. 2020 ರ ಡಿಸೆಂಬರ್‌ನಲ್ಲಿ ಗೃಹ ಸಾಲ ವ್ಯವಹಾರದಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ಎಸ್‌ಬಿಐ ತಿಳಿಸಿದೆ. ಇತ್ತೀಚೆಗೆ ಎಸ್‌ಬಿಐ 5 ಲಕ್ಷ ಕೋಟಿ ಗೃಹ ಸಾಲ ನೀಡಿದೆ. 2024 ರ ಆರ್ಥಿಕ ವರ್ಷದ ವೇಳೆಗೆ 7 ಲಕ್ಷ ಕೋಟಿ ರೂಪಾಯಿವರೆಗೆ ಗೃಹ ಸಾಲ ನೀಡಲು ಬ್ಯಾಂಕ್ ಉದ್ದೇಶ ಹೊಂದಿದೆ.