alex Certify BIG NEWS: 45 ಪಿಜಿ ಜಾಲಾಡಿದರೂ ಸಿಗಲಿಲ್ಲ ಸಂತ್ರಸ್ತೆ ಸುಳಿವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 45 ಪಿಜಿ ಜಾಲಾಡಿದರೂ ಸಿಗಲಿಲ್ಲ ಸಂತ್ರಸ್ತೆ ಸುಳಿವು

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಕುರಿತಾಗಿ ಪೊಲೀಸರಿಗೆ ಬೆಂಗಳೂರಿನ ಆರ್.ಟಿ.ನಗರ ವ್ಯಾಪ್ತಿಯಲ್ಲಿ ಯಾವುದೇ ಸುಳಿವು ಸಿಗುತ್ತಿಲ್ಲ ಎನ್ನಲಾಗಿದೆ.

ರಾಸಲೀಲೆ ಸಿಡಿ ಪ್ರಕರಣ ಕುರಿತಾಗಿ ದೂರುದಾರ ನಾಗರಿಕ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ಸಂತ್ರಸ್ತ ಯುವತಿ ಆರ್.ಟಿ.ನಗರ ಪಿಜಿಯಲ್ಲಿ ವಾಸವಿದ್ದುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸಿಡಿ ಬಹಿರಂಗ ವಿಚಾರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ: ಏನೂ ಮಾತಾಡಲ್ಲ ಎಂದ್ರು ಶಾಸಕಿ

ಆರ್.ಟಿ.ನಗರ ವ್ಯಾಪ್ತಿಯ ಒಟ್ಟು 45 ಪಿಜಿಗಳಲ್ಲಿ ಪೊಲೀಸರು ರಿಜಿಸ್ಟರ್, ಲೆಡ್ಜರ್ ಪುಸ್ತಕದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲಿಯೂ ಸಂತ್ರಸ್ತ ಯುವತಿಯ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...