ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಕುರಿತಾಗಿ ಹೊಸ ಬಾಂಬ್ ಸಿಡಿಸಿರುವ ಸಚಿವ ಸಿ.ಪಿ. ಯೋಗೇಶ್ವರ್, ಸಿಡಿ ಪ್ರಕರಣದ ಹಿಂದೆ ಕನಕಪುರದವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ. ಯೋಗೇಶ್ವರ್, ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಒಂದು ದೊಡ್ಡ ಷಡ್ಯಂತ್ರ. ಕನಕಪುರದವರು ಯಾವ ರೀತಿ ಷಡ್ಯಂತ್ರ ಮಾಡಿದರು, ಬೆಳಗಾವಿಯವರ ಪಾತ್ರವೇನು ಎಂಬುದು ಗೊತ್ತು. ಇದು ರಾಜಕೀಯವಾಗಿ ನಡೆದಿರುವ ಪಿತೂರಿ. ಮೈತ್ರಿ ಸರ್ಕಾರವನ್ನು ಉರುಳಿಸಿದ ಕಾರಣಕ್ಕಾಗಿ ನಡೆದ ಷಡ್ಯಂತ್ರ ಎಂದು ಹೇಳಿದರು.
ಕೋರ್ಟ್ ಮೆಟ್ಟಿಲೇರಿದ ಸಚಿವರ ಪ್ರಕರಣ; ಹೈಕಮಾಂಡ್ ಅಂಗಳ ತಲುಪಿದ ರಾಜ್ಯ ನಾಯಕರ ವರದಿ
ಇದೇ ವೇಳೆ ಕೋರ್ಟ್ ಮೊರೆ ಹೋದ ಸಚಿವರ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕ ರಕ್ಷಣೆಗಾಗಿ ಕೋರ್ಟ್ ಮೋರೆ ಹೋಗಿರಬಹುದು. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.