ದೇಶದಲ್ಲಿ ನಾಗರಿಕರಿಗೆ ನೀಡಲಾಗುವ ಆಧಾರ್ ಕಾರ್ಡ್ನಿಂದ ಸಾಕಷ್ಟು ಉಪಯೋಗಗಳಿದೆ. ಹೊಸ ಸಿಮ್ ಕಾರ್ಡ್, ಕಾರು ಖರೀದಿ, ಬ್ಯಾಂಕ್ ಖಾತೆ ತೆರೆಯೋದು ಈ ಎಲ್ಲಾ ಕೆಲಸಗಳನ್ನ ಆಧಾರ್ ಕಾರ್ಡ್ ಸರಳೀಕೃತ ಮಾಡಿಕೊಡುತ್ತೆ.
ಆಧಾರ್ ಕಾರ್ಡ್ನಿಂದ ಈ ಉಪಯೋಗ ಮಾತ್ರವಲ್ಲದೇ ಹೊಸ ಲರ್ನಿಂಗ್ ಲೈಸೆನ್ಸ್ ಇಲ್ಲವೇ ಲೈಸೆನ್ಸ್ ರಿನ್ಯೂ ಮಾಡಲು ಕೂಡ ತುಂಬಾನೇ ಸಹಾಯ ಮಾಡುತ್ತೆ. ಆಧಾರ್ ಕಾರ್ಡ್ ಒಂದಿದ್ದರೆ ನೀವು ಮನೆಯಲ್ಲೇ ಕೂತು ಗಾಡಿಗೆ ತಾತ್ಕಾಲಿಕ ನೋಂದಣಿ ಮಾಡಬಹುದಾಗಿದೆ.
ಲೈಸೆನ್ಸ್ ಪಡೆದ ಬಳಿಕ ಅದನ್ನ ರಿನ್ಯೂ ಮಾಡಿಸಬೇಕಾಗಿ ಬರುತ್ತೆ. ಈ ಲೈಸೆನ್ಸ್ ರಿನ್ಯೂ ಮಾಡಿಸಲು ನೀವು ಆರ್ಟಿಒ ಕಚೇರಿಗೆ ಅಲೆಯಬೇಕಾಗುತ್ತೆ. ಆದರೆ ಆಧಾರ್ ಕಾರ್ಡ್ನ ನೆರವಿನಿಂದ ನೀವು ಸುಲಭವಾಗಿ ಲೈಸೆನ್ಸ್ ರಿನ್ಯೂ ಮಾಡಬಹುದಾಗಿದೆ. ಮನೆಯಲ್ಲೇ ಕೂತು ನೀವು ಆಧಾರ್ ಆಥೆಂಟಿಕೇಷನ್ ನೆರವಿನಿಂದ ಲೈಸೆನ್ಸ್ ರಿನ್ಯೂ ಮಾಡಬಹುದಾಗಿದೆ. ಇದರ ಜೊತೆಯಲ್ಲಿ ನೀವು ನಕಲಿ ಲೈಸೆನ್ಸ್ ಪ್ರತಿಯನ್ನ ಪಡೆಯಬಹುದಾಗಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಾರ್ಚ್ 4ರಿಂದ ವಿವಿಧ ಪ್ರಕಾರದ ಸಂಪರ್ಕ ರಹಿತ ಸೇವೆಯನ್ನ ಶುರು ಮಾಡಿದೆ. ಈ ವ್ಯವಸ್ಥೆಯಿಂದಾಗಿ ಲೈಸೆನ್ಸ್ ಹಾಗೂ ಆರ್ಸಿಗೆ ಸಂಬಂಧಿಸಿದ ಸೇವೆಗಾಗಿ ಆರ್ಟಿಒ ಕಚೇರಿಗೆ ಅಲೆಯಬೇಕು ಎಂದಿಲ್ಲ. ಮನೆಯಲ್ಲೇ ಕೂತು ಗ್ರಾಹಕರು ಈ ಸೇವೆಯನ್ನ ಪಡೆಯಬಹುದಾಗಿದೆ. ಇದರಿಂದ ಜನರ ಸಮಯ ಕೂಡ ಉಳಿತಾಯವಾಗಲಿದೆ.
ಮನೆಯಲ್ಲೇ ಕೂತು ನೀವು ಪಡೆಯಬಹುದಾದ ಸೇವಾ ವಿವರ ಇಲ್ಲಿದೆ ನೋಡಿ:
1. ಲರ್ನಿಂಗ್ ಲೈಸೆನ್ಸ್
2.ಲೈಸೆನ್ಸ್ ರಿನ್ಯೂ
3. ಲೈಸೆನ್ಸ್ನ ನಕಲಿ ಪ್ರತಿ
4. ಡಿಎಲ್ ಹಾಗೂ ಆರ್ಸಿಯಲ್ಲಿ ವಿಳಾಸ ಬದಲಾವಣೆ
5. ವಾಹನದ ಶ್ರೇಣಿ ನಮೂದಿಸುವುದು
6. ಅಂತಾರಾಷ್ಟ್ರೀಯ ಪರವಾನಿಗಿ ಪಡೆಯುವುದು
7. ಗಾಡಿಯ ತಾತ್ಕಾಲಿಕ ನೋಂದಣಿ
8.ಎನ್ಒಸಿಗೆ ನೋಂದಣಿ ಪ್ರಮಾಣಪತ್ರಕ್ಕಾಗಿ ಅರ್ಜಿ
9.ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನದ ನೋಂದಣಿಗೆ ಅರ್ಜಿ
10.ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನಕ್ಕೆ ಹೊಸ ನೋಂದಣಿ ಗುರುತು ನಿಯೋಜಿಸಲು ಅರ್ಜಿ