ಬೆಂಗಳೂರು: ಮಾನಹಾನಿಕಾರಕ ಸುದ್ದಿಯನ್ನು ಮಾಧ್ಯಮಗಳಲ್ಲಿ ಬಿತ್ತರ ಮಾಡಬಾರದು ಎಂದು ಕೋರಿ 6 ಸಚಿವರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಮೊರೆ ಹೋಗಿರುವ ಪ್ರಕರಣ ಇದೀಗ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸ್ಫೋಟಗೊಂಡ ಬೆನ್ನಲ್ಲೇ ಆತಂಕಕ್ಕೀಡಾಗಿರುವ ಬಾಂಬೆ ಫ್ರೆಂಡ್ಸ್ ಖ್ಯಾತಿಯ 6 ಸಚಿವರು ಕೋರ್ಟ್ ಮೊರೆ ಹೋಗಿದ್ದು, ತಮ್ಮ ಬಗ್ಗೆ ಇಂತಹ ಸುದ್ದಿಗಳು ಪ್ರಸಾರ ಮಾಡದಂತೆ ತಡೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಸಚಿವ ಅರವಿಂದ ಲಿಂಬಾವಳಿ ಅವರಿಗೆ ಬುಲಾವ್ ನೀಡಿದ್ದು, ಸಧ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಗಾಡ್ ಫಾದರ್ ಇಲ್ಲದೇ ಬೆಳೆದಿದ್ದೇವೆ; ಕುತಂತ್ರಿಗಳ ಷಡ್ಯಂತ್ರ ಸಹಿಸಲಾಗದು ಎಂದ ಬಿ.ಸಿ. ಪಾಟೀಲ್
ಒಟ್ಟಾರೆ 6 ಸಚಿವರು ಕೋರ್ಟ್ ಮೆಟ್ಟಿಲೇರಿರುವ ಪ್ರಕರಣ ಇದೀಗ ಹೈಕಮಾಂಡ್ ಅಂಗಳ ತಲುಪಿದ್ದು, ಹೈಕಮಾಂಡ್ ನಡೆ ಕಾದುನೋಡಬೇಕಿದೆ.