ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಸ್ಫೋಟದ ಬೆನ್ನಲ್ಲೇ ಇದೀಗ ಮಿತ್ರ ಮಂಡಳಿಯ ಎಲ್ಲಾ ಸಚಿವರಿಗೂ ನಡುಕ ಶುರುವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಸಚಿವರು ಅನಗತ್ಯವಾಗಿ ಕೋರ್ಟ್ ಮೊರೆ ಹೋಗುವ ಮೂಲಕ ಗೋಜಲು ಸೃಷ್ಟಿಸಬಾರದು. ಹೀಗೆ ಅನಗತ್ಯವಾಗಿ ಕೋರ್ಟ್ ಮೆಟ್ಟಿಲೇರುವುದರಿಂದ ಏನೋ ವಿಷಯವಿರಬೇಕು ಅದಕ್ಕಾಗಿಯೇ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಅನುಮಾನ, ಗೊಂದಲಗಳು ಸೃಷ್ಟಿಯಾಗುವಂತಾಗುತ್ತದೆ ಎಂದು ಹೇಳಿದ್ದಾರೆ.
‘ಜಾರಕಿಹೊಳಿ’ ಸಿಡಿ ಸ್ಪೋಟದ ಬೆನ್ನಲ್ಲೇ ಅಚ್ಚರಿ ಬೆಳವಣಿಗೆ: ‘ಬಾಂಬೆ ಫ್ರೆಂಡ್ಸ್’ ಖ್ಯಾತಿಯ 6 ಸಚಿವರು ಕೋರ್ಟ್ ಮೊರೆ, ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ತಡೆ ಕೋರಿ ಮನವಿ
ಇನ್ನು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್, ಅವರ ರಾಜೀನಾಮೆ ಪಡೆದುಕೊಂಡಿದೆ ಎಂದು ತಿಳಿಸಿದರು.