ಪತ್ನಿ 300 ಕ್ಕೂ ಅಧಿಕ ಅಶ್ಲೀಲ ಟಿಕ್ ಟಾಕ್ ವಿಡಿಯೋ ಮಾಡಿದ್ದರಿಂದ ಸಿಟ್ಟಿಗೆದ್ದು ಆಕೆಯ ಮೇಲೆ ಹಲ್ಲೆ ಮಾಡಿದ ಪತಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ.
ರಾಜಸ್ತಾನದ ಮಹಿಳಾ ಟಿಕ್ ಟಾಕ್ ಸ್ಟಾರ್ ತನ್ನ ಪತಿಯ ವಿರುದ್ಧ ಕ್ರೌರ್ಯದ ಆರೋಪ ಹೊರಿಸಿ ಎಫ್.ಐ.ಆರ್. ದಾಖಲಿಸಿದ್ದಾರೆ. ಬಂಧನದ ಭೀತಿಯಲ್ಲಿರುವ ಪತಿಗೆ ಸುಪ್ರೀಂ ಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಸರಕು ಸಾಗಣೆ ವಾಹನಗಳಲ್ಲಿ ಜನ ಸಾಗಿಸಿದರೆ ಕಠಿಣ ಕ್ರಮ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣ್ಯನ್ ಅವರಿದ್ದ ಪೀಠ ಜಾಮೀನು ಅರ್ಜಿ ನಿರಾಕರಿಸಿದೆ. “ಆಕೆಯ ವಿರುದ್ಧ ಅಸಮಾಧಾನವಿದ್ದರೆ ವಿಚ್ಛೇದನ ಪಡೆಯಬಹುದು. ಅದನ್ನು ಬಿಟ್ಟು ಕ್ರೌರ್ಯ ಮೆರೆಯುವುದು ಸರಿಯಲ್ಲ” ಎಂದು ಹೇಳಿ ಅರ್ಜಿಯನ್ನು ತಿರಸ್ಕಾರ ಮಾಡಿದೆ.