alex Certify ‘ಕೊರೊನಾ’ದಿಂದಾದ ಹಾನಿ ಕುರಿತು ಶಾಕಿಂಗ್ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ದಿಂದಾದ ಹಾನಿ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದು, ಇದರ ಪರಿಣಾಮವಾಗಿ ಆರ್ಥಿಕ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಆ ಬಳಿಕ ಲಾಕ್ ಡೌನ್ ಹಿಂಪಡೆಯಲಾಗಿದ್ದು,ವ್ಯಾಪಾರ ವಹಿವಾಟುಗಳು ಆರಂಭವಾದರೂ ಸಹ ಆರ್ಥಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ.

ಇದು ಜನಸಾಮಾನ್ಯರ ಮೇಲೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಮೇಲೆ ಭಾರಿ ಪರಿಣಾಮ ಬೀರಿದ್ದು, ಪೋಷಕರ ಆರ್ಥಿಕ ಸಮಸ್ಯೆಗಳ ಕಾರಣಕ್ಕಾಗಿ ಲಕ್ಷಾಂತರ ಮಕ್ಕಳು ಶಿಕ್ಷಣ ತಗ್ಗಿಸಿ ದುಡಿಮೆಗೆ ಮುಂದಾಗಿದ್ದರೆಂಬ ಶಾಕಿಂಗ್ ಸಂಗತಿ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಇನ್ನು ಹೆಣ್ಣು ಮಕ್ಕಳನ್ನು ಪೋಷಕರು ಮದುವೆ ಮಾಡಿಕೊಟ್ಟಿರುವ ಪರಿಣಾಮ ಅವರುಗಳು ಸಹ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.

ಉದ್ಯೋಗ ಬದಲಾವಣೆ ವೇಳೆ EPF ಬ್ಯಾಲೆನ್ಸ್ ಸುಲಭ ವರ್ಗಾವಣೆ: ಇಲ್ಲಿದೆ ಮುಖ್ಯ ಮಾಹಿತಿ

10ನೇ ತರಗತಿ ಉತ್ತೀರ್ಣರಾದ ಅಂದಾಜು 25 ಸಾವಿರ ಮಂದಿ ಹಾಗೂ ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ ಪ್ರಮೋಟ್ ಆದ 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಸೇರ್ಪಡೆಯಾಗಿಲ್ಲ ಎಂದು ಹೇಳಲಾಗಿದೆ. ಕೊರೊನಾ ಸೃಷ್ಟಿಸಿದ ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಗಳೇ ಇದಕ್ಕೆ ಕಾರಣವೆಂದು ಹೇಳಲಾಗಿದ್ದು, ಇದೀಗ ಈ ಕುರಿತು ಗಂಭೀರ ಚಿಂತನೆ ನಡೆಸಿರುವ ಶಿಕ್ಷಣ ಇಲಾಖೆ ಅವರುಗಳನ್ನು ಮತ್ತೆ ಶಿಕ್ಷಣದ ಕಡೆಗೆ ಸೆಳೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...