ಹಣದ ಅವಶ್ಯಕತೆ ಎಲ್ಲರಿಗೂ ಇದೆ. ಈ ಹಣವನ್ನು ಹೇಗೆ ದುಪ್ಪಟ್ಟು ಮಾಡುವುದು. ಹಾಗೆ ಲಕ್ಷ್ಮಿ ಸ್ಥಿರವಾಗಿರುವಂತೆ ಹೇಗೆ ಮಾಡುವುದು ಎನ್ನುವ ಉಪಾಯ ಕೆಲವರಿಗೆ ಮಾತ್ರ ಗೊತ್ತು.
ವಾಸ್ತು ಶಾಸ್ತ್ರ ಈ ಬಗ್ಗೆ ಹೇಳಿದೆ. ಕೆಲವರಿಗೆ ಸದಾ ಹಣದ ಸಮಸ್ಯೆ ಇದ್ದೇ ಇದೆ. ಅಂತವರು ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಲಕ್ಷ್ಮಿ ಸದಾ ಮನೆಯಲ್ಲಿ ನೆಲೆಸೋದ್ರಲ್ಲಿ ಎರಡು ಮಾತಿಲ್ಲ.
ರಸ್ತೆಯಲ್ಲಿ ನಾಣ್ಯ ಸಿಕ್ಕಿದ್ರೆ ಅದನ್ನು ಮನೆಗೆ ತಂದು ಸ್ವಚ್ಛಗೊಳಿಸಿ ಪೂಜೆ ಮಾಡಿ. ಹೀಗೆ ಮಾಡೋದ್ರಿಂದ ಹಣದ ಸಮಸ್ಯೆ ಎದುರಾಗುವುದಿಲ್ಲ.
ಮನೆಯ ಮುಖ್ಯ ಬಾಗಿಲಿಗೆ ಗಣಪತಿ ಅಥವಾ ಇಷ್ಟದೇವರ ವಿಗ್ರಹವನ್ನು ಅಳವಡಿಸಿ. ಹೀಗೆ ಮಾಡಿದಲ್ಲಿ ಸುಖ-ಸಮೃದ್ಧಿ, ಏಳಿಗೆ ಸದಾ ಇರುತ್ತೆ.
ಮನೆ ಪ್ರವೇಶ ಬಾಗಿಲಿನ ಬಲ ಭಾಗಕ್ಕೆ ಫಿಶ್ ಪಾಟ್ ಇಡಿ. ಇದರಿಂದ ಧನ ವೃದ್ಧಿಯಾಗುತ್ತದೆ.
ದೇವರ ಮನೆಯಲ್ಲಿ ಶಂಖದ ಫೋಟೋ ಅಥವಾ ಕೆತ್ತನೆ ಇರಲಿ. ಇದು ಸಂಪತ್ತು ಹೆಚ್ಚಾಗಲು ಕಾರಣವಾಗುತ್ತದೆ.