alex Certify ಬೆರಗಾಗಿಸುತ್ತೆ ಕೃಷಿ ಕ್ಷೇತ್ರದಲ್ಲಿನ ಈ ಗ್ರಾಮೀಣ ಮಹಿಳೆ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಕೃಷಿ ಕ್ಷೇತ್ರದಲ್ಲಿನ ಈ ಗ್ರಾಮೀಣ ಮಹಿಳೆ ಸಾಧನೆ

ಮಹಿಳಾ ಸಬಲೀಕರಣದ ಬಗ್ಗೆ ಎಲ್ಲರೂ ಮಾತನಾಡ್ತಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಾಧನೆ ಮಾಡಬೇಕು ಅಂದರೆ ಹಾದಿ ಸುಲಭವಾಗಂತೂ ಇರೋದಿಲ್ಲ. ಆದರೆ ಈ ಎಲ್ಲಾ ಸವಾಲುಗಳನ್ನ ದಾಟಿ ಮಂಜು ದೇವಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಬಿಹಾರದ ಮುಂಗೇರ್​ ಜಿಲ್ಲೆಯ ನಿವಾಸಿಯಾಗಿರುವ ಮಂಜು ಬಹಳ ಚಿಕ್ಕ ವಯಸ್ಸಿನಲ್ಲೇ ವಿವಾಹವಾಗಿದ್ದರು. ಶಿಕ್ಷಕಿಯಾಗಬೇಕೆಂದ ಕನಸು ಕಂಡಿದ್ದ ಮಂಜು ಕುಟುಂಬಸ್ಥರ ಒತ್ತಾಯದಿಂದಾಗಿ ತಮ್ಮ ಕನಸನ್ನ ಬದಿಗಿಟ್ಟು ವಿವಾಹಕ್ಕೆ ಒಪ್ಪಿಗೆ ನೀಡಿದ್ದರು.

ಆದರೆ ಎನ್​ಜಿಒ ಒಂದರ ಸದಸ್ಯರ ನಡುವಿನ ಆಕಸ್ಮಿಕ ಭೇಟಿಯಿಂದಾಗಿ ಆಕೆಯ ಜೀವನವೇ ಬದಲಾಗಿದೆ. ಆಕ್ಸ್​ಫ್ಯಾಮ್​ ಇಂಡಿಯಾ ಹಾಗೂ ಸೇವಾ ಭಾರತ್​ ಸದಸ್ಯರ ನೆರವಿನಿಂದ ಕೃಷಿ ಕ್ಷೇತ್ರದಲ್ಲಿ ತರಬೇತಿ ಪಡೆದ್ರು. 2016ರಿಂದ ಮಂಜು ಜೀವನವೇ ಬದಲಾಯ್ತು.

ಹೊಸ ಮಾದರಿ ಮೂಲಕ ಟೊಮ್ಯಾಟೋ ಬೆಳೆ ಬೆಳೆದ ಮಂಜು ಇದರಿಂದ 15 ಸಾವಿರ ರೂಪಾಯಿ ಸಂಪಾದಿಸಿದ್ರು. ಈ ಯಶಸ್ಸು ಮಂಜುಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಸಹಾಯಕವಾಯ್ತು. ಇದಾದ ಕೆಲವೇ ದಿನಗಳಲ್ಲಿ ಜೀವಿಕಾ – ಬಿಹಾರ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದ ಮೊಬಿಲೈಸರ್​ ಆದರು. ಸ್ಥಳೀಯ ನಿವಾಸಿಗಳಿಗೆ ಕೃಷಿ ಸಂಬಂಧಿ ಗೊಂದಲಗಳಿಗೆ ಪರಿಹಾರ ನೀಡಲು ಆರಂಭಿಸಿದ್ರು.

ಇದಾದ ಬಳಿಕ ಸ್ವಂತ ಜಮೀನನ್ನ ಖರೀದಿ ಮಾಡಿದ್ರು. ಇದೀಗ ಮಂಜು ಕೃಷಿ ಮೂಲಕ ವರ್ಷಕ್ಕೆ 60 ರಿಂದ 80 ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...