ಕಳೆದ ವರ್ಷ ಬೇಸಿಗೆ ಕಾಲದ ಸಮಯದಲ್ಲಿ 7 ವರ್ಷದ ಲಿಜಾ ಸ್ಕೋಟ್ ಎಂಬ ಬಾಲಕಿ ತನ್ನ ತಾಯಿಯ ಬೇಕರಿಯ ಸಮೀಪದಲ್ಲೇ ನಿಂಬು ಪಾನೀಯವನ್ನ ಮಾರಾಟ ಮಾಡುತ್ತಿದ್ದಳು. ಇದರಿಂದ ಬಂದ ಹಣದಲ್ಲಿ ಆಟಿಗೆ ಸಾಮಗ್ರಿ ಹಾಗೂ ಶೂಗಳನ್ನ ಕೊಳ್ಳಬಹುದೆಂದು ಲಿಜಾ ಈ ಉದ್ಯೋಗವನ್ನ ಮಾಡುತ್ತಿದ್ದಳು.
ಆದರೆ ವಿಧಿಯಾಟ ಹೇಗಿದೆ ಅಂದ್ರೆ ಆಕೆ ಈಗಲೂ ಕೂಡ ಈ ಅಂಗಡಿಯನ್ನ ನಡೆಸುತ್ತಿದ್ದಾಳೆ. ಆದರೆ ಹಣ ಮಾಡುವ ಉದ್ದೇಶ ಮಾತ್ರ ಬದಲಾಗಿದೆ. ಆಟಿಗೆ ಸಾಮಗ್ರಿ ಕೊಳ್ಳಬೇಕು ಎಂದು ಅಂಗಡಿ ಸ್ಥಾಪಿಸಿದ್ದ ಲಿಜಾ ಇದೀಗ ಮೆದುಳಿನ ಚಿಕಿತ್ಸೆಗೆ ಹಣ ಸಂಗ್ರಹಿಸುವ ಸಲುವಾಗಿ ನಿಂಬು ಪಾನಿಯವನ್ನ ಮಾರುತ್ತಿದ್ದಾಳೆ.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಲಿಜಾ ತಾಯಿ ಎಲಿಜಬೆತ್, ವೈದ್ಯರು ಲಿಜಾಗೆ ಮೆದುಳಿನಲ್ಲಿ ಗಂಭೀರ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಸದಾ ಇನ್ನೊಬ್ಬರಿಗಾಗಿ ಸಹಾಯ ಮಾಡಲು ಬಯಸುವ ಲಿಜಾ ಇದೀಗ ತನ್ನ ಚಿಕಿತ್ಸೆಗಾಗಿ ಹಣ ಸಂಗ್ರಹ ಮಾಡೋಕೆ ಮುಂದಾಗಿದ್ದಾಳೆ ಎಂದು ಹೇಳಿದ್ರು.
ಬರ್ಮಿಂಗ್ ಹ್ಯಾಮ್ನ ಉಪನಗರವೊಂದರಲ್ಲಿರುವ ಸೇವೇಜ್ ಬೇಕರಿ ಸಮೀಪದಲ್ಲಿಯೇ ಲಿಜಾಳ ನಿಂಬು ಪಾನೀಯದ ಸ್ಟಾಲ್ ಇದೆ. ಲಿಜಾಳ ಒಳ್ಳೆಯ ನಡವಳಿಕೆ ಹಾಗೂ ಆಕೆಯ ವೈದ್ಯಕೀಯ ಸ್ಥಿತಿಯನ್ನ ಅರಿತ ನಾಗರಿಕರು ಆಕೆಗೆ ಹೆಚ್ಚಿನ ಧನಸಹಾಯ ಮಾಡುತ್ತಿದ್ದಾರೆ.
ನಾನು ಆಕೆಗೆ ಹೇಳಿದ್ದೆ. ಇದನ್ನೆಲ್ಲ ನೀನು ಮಾಡಬೇಕೆಂದಿಲ್ಲ. ಆಕೆಗೆ ತನ್ನ ವೈದ್ಯಕೀಯ ಚಿಕಿತ್ಸೆಗೆ ಹಣ ಹೊಂದಿಸುವ ಬಗ್ಗೆ ನಾನು ಬಯಸಿಲ್ಲ. ಆಕೆಗೆ ತಂದೆಯಿಲ್ಲ. ನಾನು ಆಕೆಯ ಕಾಳಜಿ ವಹಿಸಬಲ್ಲೆ. ಆದರೆ ಲಿಜಾ ತನ್ನ ಸ್ವಂತ ದುಡಿಮೆಯಿಂದ 12 ಸಾವಿರ ಡಾಲರ್ ಗಳಿಸಿದ್ದಾಳೆ ಎಂದು ಹೇಳಿದ್ರು.