ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ರಂಗೇರಿದೆ. ಕೊಲ್ಕತ್ತಾದ ಬಿಗ್ರೇಡ್ ಪರೇಡ್ ಮೈದಾನದಲ್ಲಿ ರವಿವಾರ ನಡೆಯಲಿರುವ ಪ್ರಧಾನಿ ಮೋದಿ ನೇತೃತ್ವದ ಚುನಾವಣಾ ರ್ಯಾಲಿಯಲ್ಲಿ ಸೌರವ್ ಗಂಗೂಲಿ ಭಾಗಿಯಾಗಬೇಕು ಎಂದು ಬಿಜೆಪಿ ಬಹಿರಂಗ ಬೇಡಿಕೆಯನ್ನ ಇಟ್ಟಿತ್ತು. ಇದಾದ ಬಳಿಕ ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆಯಾಗ್ತಾರಾ ಎಂಬ ವಿಚಾರ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರವಾಗಿ ಮೌನ ಮುರಿದಿರುವ ಗಂಗೂಲಿ, ಎಲ್ಲರಿಗೂ ಎಲ್ಲಾ ಪಾತ್ರವನ್ನ ನಿಭಾಯಿಸೋಕೆ ಸಾಧ್ಯವಿಲ್ಲ ಎಂದು ಮಾರ್ಮಿಕ ಉತ್ತರವನ್ನ ನೀಡಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನ ರ್ಯಾಲಿಯಲ್ಲಿ ಸೇರಿಸಿಕೊಳ್ಳುವ ಮೂಲಕ ಬಂಗಾಳ ಜನತೆಗೆ ಇನ್ನಷ್ಟು ಹತ್ತಿರವಾಗೋದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಪ್ರಧಾನಿ ಮೋದಿಯನ್ನ ಭೇಟಿಯಾಗಲು ಸೌರವ್ ಗಂಗೂಲಿ ಆಗಮಿಸ್ತಾರಾ ಇಲ್ಲವಾ ಅನ್ನೋದರ ಬಗ್ಗೆಯೂ ಪಶ್ಚಿಮ ಬಂಗಾಳ ಬಿಜೆಪಿ ನಾಯಕರಿಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸೌರವ್ ಗಂಗೂಲಿ ಈ ರ್ಯಾಲಿಯಲ್ಲಿ ಭಾಗವಹಿಸಿದ್ರೆ ಅವರನ್ನ ಸ್ವಾಗತಿಸ್ತೇವೆ ಎಂದು ಪ. ಬಂಗಾಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಪ. ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಈ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ರು.
ಇನ್ನು ಈ ವಿಚಾರವಾಗಿ ಖಾಸಗಿ ಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿರುವ ಸೌರವ್ ಗಂಗೂಲಿ ನಾನು ಒಬ್ಬ ಸಾಮಾನ್ಯ ಕ್ರೀಡಾಪಟು. ಹೀಗಾಗಿ ಕ್ರಿಕೆಟ್ಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ ಮಾತ್ರ ಕೇಳಿ ಎಂದಿದ್ದಾರೆ.