98ರ ಇಳಿವಯಸ್ಸಿನಲ್ಲೂ ಬೇಳೆ – ಕಾಳುಗಳನ್ನ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಿರುವ ವೃದ್ಧನಿಗೆ ಜಿಲ್ಲಾಡಳಿತ ಸನ್ಮಾನ ಮಾಡಿದ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.
98 ವರ್ಷದ ವೃದ್ಧ ವಿಜಯ್ ಪಾಲ್ ಸಿಂಗ್ ಕಾಳು ಹಾಗೂ ಬೇಯಿಸಿದ ಬಟಾಣಿಗಳನ್ನ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ವಿಜಯ್ ಪಾಲ್ ಸಿಂಗ್ರನ್ನ ಕರೆಸಿದ ಅಧಿಕಾರಿಗಳು 11 ಸಾವಿರ ರೂಪಾಯಿಗಳನ್ನ ಗೌರವ ಧನದ ರೂಪದಲ್ಲಿ ನೀಡಿದ್ದಾರೆ. ಇದರ ಜೊತೆಯಲ್ಲಿ ಊರುಗೋಲು, ಶಾಲು ಹಾಗೂ ಪ್ರಮಾಣ ಪತ್ರವನ್ನ ನೀಡಿ ಗೌರವಿಸಲಾಗಿದೆ.
98ರ ಇಳಿವಯಸ್ಸಿನಲ್ಲೂ ಆತ್ಮನಿರ್ಭರರಾಗಿರುವ ವಿಜಯ್ ಪಾಲ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ ಎನ್ನಲಾಗಿದೆ.