ಆಯುಷ್ಮಾನ್ ಭಾರತ್ ಯೋಜನೆಗೆ ಉತ್ತೇಜನ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಮಾರ್ಚ್ 1 ರಿಂದ 15 ರವರೆಗೆ ಅನೇಕ ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಅಭಿಯಾನ ನಡೆಯುತ್ತಿದೆ. ಆಯುಷ್ಮಾನ್ ಯೋಜನೆ ಸಿಬ್ಬಂದಿ ಮನೆ ಮನೆಗೆ ತೆರಳಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ನೀಡುತ್ತಿದ್ದಾರೆ. ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿ ಮನೆ ಮನೆಗೆ ಹೋಗಿ ಗೋಲ್ಡನ್ ಕಾರ್ಡ್ ತಯಾರಿಸಿಕೊಡ್ತಿದ್ದಾರೆ.
ಆಯುಷ್ಮಾನ್ ಅಭಿಯಾನ ಸೋಮವಾರದಿಂದ ಪ್ರಾರಂಭವಾಗಿದ್ದು, ಮಾರ್ಚ್ 15 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಆಯುಷ್ಮಾನ್ ಕಾರ್ಡ್ಗಳನ್ನು ಸಿಎಸ್ಸಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು. ಇನ್ನೂ ಕಾರ್ಡ್ ತಯಾರಿಸದ ಫಲಾನುಭವಿಗಳ ಮನವೊಲಿಸುವ ಪ್ರಯತ್ನವನ್ನು ತಂಡ ಮಾಡ್ತಿದೆ. ಸಿಎಸ್ಸಿ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ತಯಾರಿಸಲು 30 ರೂಪಾಯಿ ಶುಲ್ಕ ನೀಡಬೇಕು. ಆದ್ರೆ ಈ 15 ದಿನಗಳ ಕಾಲ ಯಾವುದೇ ಶುಲ್ಕವಿರುವುದಿಲ್ಲ.
ಆಯುಷ್ಮಾನ್ ಭಾರತ್, ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಅರ್ಹತಾ ಕಾರ್ಡ್ಗಳನ್ನು ಉಚಿತವಾಗಿ ಪಡೆಯಬಹುದು. ಕಾರ್ಡ್ನಲ್ಲಿ ವಿಧಿಸಲಾಗಿದ್ದ 30 ರೂ. ಶುಲ್ಕವನ್ನು ಸರ್ಕಾರ ಮನ್ನಾ ಮಾಡಿದೆ. ಫಲಾನುಭವಿಗಳು ಈ ಶುಲ್ಕವನ್ನು ಸಾಮಾನ್ಯ ಸೇವಾ ಕೇಂದ್ರದಲ್ಲಿ ಪಾವತಿಸಬೇಕಾಗಿತ್ತು. ನಕಲಿ ಕಾರ್ಡ್ಗಳು ಅಥವಾ ಮರುಮುದ್ರಣಕ್ಕೆ ಫಲಾನುಭವಿಗಳು 15 ರೂಪಾಯಿ ನೀಡಬೇಕು.