ಅಕ್ಲೆಂಡ್: ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಕಂಪನ ಉಂಟಾಗಿದೆ.
ನ್ಯೂಜಿಲೆಂಡ್ ನ ಪೂರ್ವ ಕರಾವಳಿ ನಾರ್ತ್ ಐಲ್ಯಾಂಡ್ ನಲ್ಲಿ ಭಾರಿ ಭೂಕಂಪನ ಉಂಟಾಗಿದ್ದು, ಸಮುದ್ರ ತೀರಗಳಲ್ಲಿ ಸುನಾಮಿ ಉಂಟಾಗುವ ಎಚ್ಚರಿಕೆ ನೀಡಲಾಗಿದೆ. ಸುನಾಮಿ ಸಾಧ್ಯತೆ ಹಿನ್ನೆಲೆಯಲ್ಲಿ ಸಮುದ್ರ ತೀರಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.
ಯುಎಸ್ ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ನ್ಯೂಜಿಲೆಂಡ್ ನ ಆಕ್ಲೆಂಡ್ ಪೂರ್ವ ಭಾಗಕ್ಕೆ 414 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಕಂಡುಬಂದಿದೆ.