ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ ಅನುಸಾರ ಚಲನಚಿತ್ರ, ಸುದ್ದಿ, ವಿಡಿಯೋಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸಲು ಚಿಂತನೆ ನಡೆದಿದೆ.
ಸಂಗೀತ, ಸಿನಿಮಾ, ಸಾಮಾನ್ಯ ಮನರಂಜನೆ, ಸುದ್ದಿ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋಗಳನ್ನು ರೈಲುಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೀಡಿಯಾ ಸರ್ವರ್ ಗಳನ್ನು ಬೋಗಿಗಳ ಒಳಗೆ ಇರಿಸಲಾಗುವುದು ಎಂದು ರೈಲ್ವೆ ಸಿಎಂಡಿ ಪುನೀತ್ ಚಾವ್ಲಾ ತಿಳಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಮನರಂಜನೆ ಸಿಗಲಿದೆ. 5723 ಉಪನಗರ ರೈಲುಗಳು, 5952 ಹೆಚ್ಚು ವೈಫೈ ಸೌಲಭ್ಯ ಹೊಂದಿದ ರೈಲು ನಿಲ್ದಾಣಗಳು ಸೇರಿದಂತೆ 8731 ರೈಲುಗಳಲ್ಲಿ ಈ ಸೇವೆ ಒದಗಿಸಲಾಗುತ್ತದೆ.
ರಾಜಧಾನಿಯಲ್ಲಿ ಪೈಲೆಟ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಹೆಚ್ಚಿನ ಶುಲ್ಕ ರಹಿತ ಆದಾಯ ಗಳಿಸುವ ಉದ್ದೇಶದಿಂದ ರೈಲ್ವೆ ಮಂಡಳಿ ರೈಲುಗಳಲ್ಲಿ ಪ್ರಯಾಣಿಕರಿಗೆ ಕಾಡ್ ಸೇವೆ ಪಡಿಚಯಿಸಲಿದೆ ಎನ್ನಲಾಗಿದೆ.