ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡನ್ನು ಪ್ರತಿಯೊಬ್ಬರೂ ಭದ್ರವಾಗಿಟ್ಟುಕೊಳ್ಳುತ್ತಾರೆ. ಆಧಾರ್ ನೋಂದಣಿಗಾಗಿ ಆಧಾರ್ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು. ಆಧಾರ್ ಕಾರ್ಡ್ ನೋಂದಣಿ ನಂತ್ರ ಆಧಾರ್ ಕೇಂದ್ರದಿಂದ ದಾಖಲಾತಿ ಸ್ಲಿಪ್ ನೀಡಲಾಗುತ್ತದೆ. ಆದ್ರೆ ಸಾಮಾನ್ಯವಾಗಿ ಯಾರೂ ದಾಖಲಾತಿ ಸ್ಲಿಪ್ ಬಗ್ಗೆ ಗಮನ ಹರಿಸುವುದಿಲ್ಲ.
ಆಧಾರ್ ಕಾರ್ಡ್ ಮಾತ್ರವಲ್ಲ ಸ್ಲಿಪ್ ಕೂಡ ಬಹಳ ಮುಖ್ಯವಾದ ದಾಖಲೆಯಾಗಿದೆ. ಆಧಾರ್‌ಗೆ ಅರ್ಜಿ ಸಲ್ಲಿಸಿದಾಗ ಅಥವಾ ಕಾರ್ಡ್ ನವೀಕರಿಸಲು ಅರ್ಜಿ ಸಲ್ಲಿಸಿದಾಗಲೆಲ್ಲಾ ಅದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ದಾಖಲಾತಿ ಸ್ಲಿಪ್‌ನಲ್ಲಿರುತ್ತದೆ. ಈ ದಾಖಲಾತಿ ಸ್ಲಿಪ್‌ನಲ್ಲಿ ಐಡಿ ಅಥವಾ ನವೀಕರಣ ವಿನಂತಿ ಸಂಖ್ಯೆ ಇರುತ್ತದೆ. ಈ ಇಐಡಿ / ಯುಆರ್ಎನ್ ಮೂಲಕ ಆಧಾರ್ ಕಾರ್ಡ್‌ನ ಸ್ಥಿತಿಯನ್ನು ಪರಿಶೀಲಿಸಬಹುದು.
ಯಾವುದೇ ಸರ್ಕಾರಿ ಯೋಜನೆಯ ಲಾಭ ಪಡೆಯಲು ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದ್ದರೂ ಆಧಾರ್ ಕೈಗೆ ಸಿಗದೆ ಹೋದ ಸಂದರ್ಭದಲ್ಲಿ ಸ್ಲಿಪ್ ನೀಡಬಹುದು. ಆಧಾರ್ ಕಾರ್ಡ್ ತಪ್ಪಾಗಿ ಕಳೆದುಹೋದಾಗ ದಾಖಲಾತಿ ಸ್ಲಿಪ್ ಬಹಳ ಮುಖ್ಯ. ಆಧಾರ್ ಸಂಖ್ಯೆ ನೆನಪಿಲ್ಲದಿದ್ದರೆ, ದಾಖಲಾತಿ ಸ್ಲಿಪ್ ಸಹಾಯದಿಂದ ಅದನ್ನು ಮತ್ತೆ ಡೌನ್‌ಲೋಡ್ ಮಾಡಬಹುದು.
ಆಧಾರ್ ದಾಖಲಾತಿ ಸ್ಲಿಪ್ ಕಳೆದುಕೊಂಡಿದ್ದರೆ ಚಿಂತಿಸಬೇಕಾಗಿಲ್ಲ. 1947 ಗೆ ಕರೆ ಮಾಡುವ ಮೂಲಕ ಅದನ್ನು ಮತ್ತೆ ಪಡೆಯಬಹುದು. ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಿದ್ದರೆ ಮಾತ್ರ ಸ್ಲಿಪ್ ನಿಮಗೆ ಸಿಗುತ್ತದೆ.