alex Certify ಫೇಮಸ್‌ ಮಾಡಿದ ಭಾರತೀಯರಿಗೆ ʼಧನ್ಯವಾದʼ ಹೇಳಿದ ಪಾಕ್‌ ಹುಡುಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಮಸ್‌ ಮಾಡಿದ ಭಾರತೀಯರಿಗೆ ʼಧನ್ಯವಾದʼ ಹೇಳಿದ ಪಾಕ್‌ ಹುಡುಗಿ

ಬರೀ 5 ಸೆಕೆಂಡ್‌ಗಳ ವಿಡಿಯೋದೊಂದಿಗೆ ಭಾರತದಲ್ಲಿ ಬಲು ಫೇಮಸ್ ಆದ ಪಾಕಿಸ್ತಾನದ ’ಪಾವ್ರಿ ಗರ್ಲ್’ ಖ್ಯಾತಿಯ 19 ವರ್ಷದ ವಿದ್ಯಾರ್ಥಿನಿ ತನಗೆ ಖ್ಯಾತಿ ಕೊಟ್ಟ ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ.

ದನಾನೀರ್‌ ಮೊಬೀನ್ ಹೆಸರಿನ ಈ ವಿದ್ಯಾರ್ಥಿನಿ ಶೇರ್‌ ಮಾಡಿದ್ದ ಪುಟ್ಟ ವಿಡಿಯೋವನ್ನು ಉತ್ತರ ಪಾಕಿಸ್ತಾನದ ನಥಾಯ್‌ಗಾಲಿ ಪರ್ವತ ಪ್ರದೇಶದಲ್ಲಿ ಶೂಟ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಮೊಬೀನ್ ತನ್ನ ಸ್ನೇಹಿತೆಯರೊಂದಿಗೆ ಎಂಜಾಯ್ ಮಾಡುವುದನ್ನು ನೋಡಬಹುದಾಗಿದೆ.

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್-ಡೀಸೆಲ್ ದರ ಲೀಟರ್ ಗೆ 8.5 ರೂ. ಇಳಿಕೆ ಸಾಧ್ಯತೆ

“ಇದು ನಮ್ಮ ಕಾರು, ಇದು ನಾವು, ಹಾಗೂ ಇಲ್ಲಿ ನಮ್ಮ ಪಾರ್ಟಿ ನಡೆಯುತ್ತಿದೆ” ಎಂದು ಮೊಬೀನ್ ಪಾಶ್ಚಾತ್ಯ ಆಕ್ಸೆಂಟ್‌ನಲ್ಲಿ ಉರ್ದುವಿನಲ್ಲಿ ಮಾತನಾಡಿದ್ದಳು. ಆಕೆಯ ಆಕ್ಸೆಂಟ್‌ನ ಕಾರಣದಿಂದ ದೇಸೀ ನೆಟ್ಟಿಗರು ಹಾಗೂ ಪಾಕಿ ನೆಟ್ಟಿಗರಲ್ಲಿ ಮೀಮ್ ಮಾಡಲು ಸಾಕಷ್ಟು ಮೇವು ಸಿಕ್ಕಂತಾಗಿತ್ತು. ಉಭಯ ದೇಶಗಳ ಸೆಲೆಬ್ರಿಟಿಗಳೂ ಸಹ ’ಪಾವ್ರಿ ಗರ್ಲ್’ ಅನ್ನು ಅಣಕ ಮಾಡಿ ತಮ್ಮದೇ ವಿಡಿಯೋ ಮಾಡಿದ್ದರು.

https://www.instagram.com/p/CK9JmaXBEtc/?utm_source=ig_web_copy_link

https://www.instagram.com/p/CLbiVZfjqhd/?utm_source=ig_web_copy_link

https://www.instagram.com/p/CLa9NSHhuHm/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...