ನೌಕರರ ಪಿಂಚಣಿ ಯೋಜನೆಯಡಿ ಪಿಂಚಣಿದಾರರಿಗೆ ವಿಶಿಷ್ಟ ಸಂಖ್ಯೆ ನೀಡಲಾಗುತ್ತದೆ. ಈ ಸಂಖ್ಯೆಯ ಸಹಾಯದಿಂದ ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಾರೆ. ಈ ಸಂಖ್ಯೆಯನ್ನು ಪಿಂಚಣಿ ಪಾವತಿ ಆದೇಶ (ಪಿಪಿಒ) ಎಂದು ಕರೆಯಲಾಗುತ್ತದೆ.
ಯಾವುದೇ ಕಂಪನಿಯಿಂದ ನಿವೃತ್ತಿ ಹೊಂದುತ್ತಿರುವ ವ್ಯಕ್ತಿಗೆ ಪಿಪಿಒ ಸಂಖ್ಯೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ನೀಡುತ್ತದೆ. ನಿವೃತ್ತಿಯ ನಂತರ ಇಪಿಎಫ್ಒ ನೌಕರನಿಗೆ ಪತ್ರವೊಂದನ್ನು ನೀಡುತ್ತದೆ. ಅದರಲ್ಲಿ ಪಿಪಿಒ ವಿವರಗಳಿರುತ್ತವೆ. ವ್ಯಕ್ತಿ ತನ್ನ ಪಿಪಿಒ ಸಂಖ್ಯೆಯನ್ನು ಕಳೆದುಕೊಂಡರೆ ಅವನು ಅದನ್ನು ಸುಲಭವಾಗಿ ತನ್ನ ಬ್ಯಾಂಕ್ ಖಾತೆಯ ಸಹಾಯದಿಂದ ಪಡೆಯಬಹುದು.
ಪಿಂಚಣಿದಾರರು ಪಿಪಿಒ ಸಂಖ್ಯೆಯನ್ನು ಮರೆತಿದ್ದರೆ ಮೊದಲು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಹೋಗಬಹುದು. ಅಲ್ಲಿ ಪಿಂಚಣಿದಾರರ ಪೋರ್ಟಲ್ ಕ್ಲಿಕ್ ಮಾಡಬೇಕು. ಅಲ್ಲಿ ಪಿಪಿಒ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಕಬೇಕು. ಬ್ಯಾಂಕ್ ಖಾತೆ ನಂಬರ್ ಹಾಕಿದ ತಕ್ಷಣ ಪಿಪಿಒ ಸಂಖ್ಯೆಯ ಮಾಹಿತಿ ಸಿಗುತ್ತದೆ. https://mis.epfindia.gov.in/PensionPaymentEnquiry/ ನಲ್ಲಿ ಕೂಡ ನೀವು ಪಿಂಚಣಿ ಮಾಹಿತಿ ಪಡೆಯಬಹುದು.