ನೀವೇನಾದರೂ ಅಂಚೆ ಕಚೇರಿಯಲ್ಲಿ ಖಾತೆಯನ್ನ ಹೊಂದಿದ್ದರೆ ನಿಮಗೊಂದು ಮಹತ್ವದ ಸೂಚನೆ ಕಾದಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಇನ್ಮುಂದೆ ಜಮೆ, AEPS ಹಾಗೂ ಹಣ ವಿತ್ಡ್ರಾಗೆ ಶುಲ್ಕವನ್ನ ವಿಧಿಸಲು ನಿರ್ಧರಿಸಿದೆ. ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ನಿಮ್ಮದೇನಾದರೂ ಉಳಿತಾಯ ಖಾತೆ ಆಗಿದ್ದರೆ ತಿಂಗಳಲ್ಲಿ ನಾಲ್ಕು ಬಾರಿ ವಿತ್ ಡ್ರಾ ಮಾಡಿದ್ರೆ ಯಾವುದೇ ಶುಲ್ಕ ವಿಧಿಸಲಾಗೋದಿಲ್ಲ. ಇದಾದ ಬಳಿಕದ ವ್ಯವಹಾರಕ್ಕೆ 25 ರೂಪಾಯಿಗೆ 0.50 ಪ್ರತಿಶತ ಚಾರ್ಜ್ ಬೀಳಲಿದೆ.
ಬೇಸಿಕ್ ಸೇವಿಂಗ್ಸ್ ಅಕೌಂಟ್ಸ್ನಲ್ಲಿ ಹಣ ಜಮೆ ಮಾಡಿದ್ರೆ ಯಾವುದೇ ಶುಲ್ಕ ವಿಧಿಸಲಾಗೋದಿಲ್ಲ. ಆದರೆ ಸೇವಿಂಗ್ಸ್ ಹಾಗೂ ಕರೆಂಟ್ ಅಕೌಂಟ್ಗಳಿಗೆ 25 ಸಾವಿರ ರೂಪಾಯಿಗಳವರೆಗೆ ಉಚಿತವಾಗಿ ಹಣ ಡ್ರಾ ಮಾಡಬಹುದಾಗಿದೆ. ಈ ಲಿಮಿಟ್ ದಾಟಿದ ಬಳಿಕ ಪ್ರತಿ ವ್ಯವಹಾರಕ್ಕೆ 25 ರೂಪಾಯಿ ಶುಲ್ಕ ಭರಿಸಬೇಕು. ಇನ್ನು ಇಂತಹ ಖಾತೆಗಳಿಗೆ ಹಣ ಜಮೆ ಮಾಡಲು ಕೂಡ ಲಿಮಿಟ್ ಇದೆ. ಪ್ರತಿ ತಿಂಗಳು 10 ಸಾವಿರ ರೂಪಾಯಿವರೆಗೆ ಉಚಿತ ಜಮೆ ಮಾಡಬಹುದಾಗಿದೆ. ಇದಾದ ಬಳಿಕ 0.50 ಪ್ರತಿಶತ ಶುಲ್ಕ ಭರಿಸಬೇಕಾಗುತ್ತದೆ.