alex Certify ಕುಟುಂಬ ಸೇರಿದ ಗೀತಾ ಮುಂದಿದೆ ದೊಡ್ಡ ಗುರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬ ಸೇರಿದ ಗೀತಾ ಮುಂದಿದೆ ದೊಡ್ಡ ಗುರಿ

ತನ್ನ 9ನೇ ವಯಸ್ಸಿನಲ್ಲಿ ಗೊತ್ತಾಗದೆ ಪಾಕಿಸ್ತಾನಕ್ಕೆ ಹೋಗಿದ್ದ ಗೀತಾ 24ನೇ ವಯಸ್ಸಿನಲ್ಲಿ ಭಾರತಕ್ಕೆ ವಾಪಸ್ ಆಗಿದ್ದಳು. ಈಗ ಮಹಾರಾಷ್ಟ್ರದ ಪರಭಾನಿಯಲ್ಲಿರುವ ತನ್ನ ಕುಟುಂಬದೊಂದಿಗೆ ಗೀತಾ ಸೇರಿಕೊಂಡಿದ್ದಾಳೆ. ಆದ್ರೆ ಭವಿಷ್ಯದ ಬಗ್ಗೆ ನಿರ್ಧರಿಸಲು ಸಮಯ ತೆಗೆದುಕೊಳ್ಳುವುದಾಗಿ ಗೀತಾ ಹೇಳಿದ್ದಾಳೆ.

ಮಾತು ಬಾರದ ಗೀತಾ 9ನೇ ವಯಸ್ಸಿನಲ್ಲಿ ರೈಲಿನ ಮೂಲಕ ಭಾರತದ ಗಡಿ ದಾಟಿದ್ದಳು. ಲಾಹೋರ್ ನಲ್ಲಿ ಪಾಕ್ ಸೈನಿಕರು ಆಕೆಯನ್ನು ವಶಕ್ಕೆ ಪಡೆದಿದ್ದರು. ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಗೀತಾಗೆ ಆಶ್ರಯ ನೀಡಲಾಗಿತ್ತು. 2010ರಲ್ಲಿ ಗೀತಾ ಪಾಕಿಸ್ತಾನದಲ್ಲಿರುವುದು ಭಾರತ ಸರ್ಕಾರಕ್ಕೆ ಗೊತ್ತಾಗಿತ್ತು. 2015ರ ಅಕ್ಟೋಬರ್ ನಲ್ಲಿ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವಿನಿಂದ ಗೀತಾ ಭಾರತಕ್ಕೆ ವಾಪಸ್ ಆಗಿದ್ದಳು. ನಂತ್ರ ಮಹಾರಾಷ್ಟ್ರದಲ್ಲಿರುವ ಆಕೆ ಕುಟುಂಬವನ್ನು ಪತ್ತೆ ಹಚ್ಚುವ ಕಾರ್ಯ ಶುರುವಾಗಿತ್ತು.

ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್​ ಕಶ್ಯಪ್​ ಸೇರಿದಂತೆ ಹಲವರ ಮನೆ ಮೇಲೆ ಐಟಿ ರೇಡ್

ಸುಮಾರು 5 ವರ್ಷಗಳ ಕಾಲ ಸರ್ಕಾರಿ ಸಂಸ್ಥೆ ಹಾಗೂ ಎನ್ಜಿಓ ಗೀತಾ ಕುಟುಂಬ ಪತ್ತೆ ಹಚ್ಚುವ ಕೆಲಸ ನಡೆಸಿತ್ತು. ಒಂದು ಡಜನ್ ಗಿಂತಲೂ ಹೆಚ್ಚು ಕುಟುಂಬಗಳ ವಿಚಾರಣೆಯಾಗಿತ್ತು. ಎರಡು ಕುಟುಂಬಗಳ ಡಿ ಎನ್ ಎ ಪರೀಕ್ಷೆ ನಡೆದಿತ್ತು. ಸತತ ಪ್ರಯತ್ನದ ನಂತ್ರ 29 ವರ್ಷದ ಗೀತಾ, ಕುಟುಂಬದ ಮಡಿಲು ಸೇರಿದ್ದಾಳೆ.

ಗೀತಾ ನಿಜವಾದ ಹೆಸರು ರಾಧಾ ವಾಘಮರೆ. ತಂದೆ ಹೆಸರು ಸುಧಾಕರ್ ವಾಘಮರೆ. ಕೆಲ ವರ್ಷಗಳ ಹಿಂದೆಯೇ ಅವರು ಸಾವನ್ನಪ್ಪಿದ್ದಾರೆ. ತಾಯಿ ಮೀನಾಗೆ ಈಗ 71 ವರ್ಷ. ಮೀನಾ ಇನ್ನೊಂದು ಮದುವೆಯಾಗಿದ್ದು, ಅವ್ರ ಹೆಸರು ಈಗ ಮೀನಾ ದಿನಕರ್ ಪಂಧಾರೆ. ಗೀತಾಗೆ ತಾಯಿಯ ಮಾತುಗಳು ಅರ್ಥವಾಗುವುದಿಲ್ಲ. ಕಿವುಡಿ, ಮೂಗಿಯಾಗಿರುವ ಗೀತಾ ಸಂಕೇತದ ಮೂಲಕ ತನ್ನ ಭಾವನೆ ಹೇಳುತ್ತಾಳೆ. ಆದ್ರೆ ಇದ್ಯಾವುದೂ ತಾಯಿ, ಮಗಳ ಪ್ರೀತಿಗೆ ಅಡ್ಡಿಯಾಗಿಲ್ಲ.

ತಾಯಿ ಮಗಳನ್ನು ಸಣ್ಣ ಮಗುವಿನಂತೆ ಅಪ್ಪಿ ಮುದ್ದಾಡಿದ್ದಾರೆ. ಇಷ್ಟು ದಿನ ಗೀತಾ ನೋಡಿಕೊಳ್ತಿದ್ದ ಸಂಸ್ಥೆ, ಗೀತಾಗೆ ಶಿಕ್ಷಣ ನೀಡ್ತಿದೆ. ಕುಟುಂಬ ಸೇರುವುದು ಮಾತ್ರ ಗೀತಾ ಗುರಿಯಲ್ಲ. 10ನೇ ತರಗತಿ ಪಾಸ್ ಆಗುವುದು ಆಕೆ ಗುರಿ. ಹಿಂದಿ, ಇಂಗ್ಲೀಷ್ ಮತ್ತು ಮರಾಠಿಯನ್ನು ಗೀತಾ ಕಲಿಯುತ್ತಿದ್ದಾಳೆ. 10ನೇ ತರಗತಿ ಪಾಸ್ ಆದ್ಮೇಲೆ ಆಕೆಗೆ ಕೆಲಸ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸಂಸ್ಥೆ ಹೇಳಿದೆ. ಐದು ವರ್ಷಗಳಿಂದ ಸುಮಾರು 25 ಮದುವೆ ಪ್ರಸ್ತಾಪವನ್ನು ಗೀತಾ ತಳ್ಳಿಹಾಕಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...