ಪುಣೆ: ಸಲೂನ್ ಮಾಲೀಕರೊಬ್ಬರು ಗ್ರಾಹಕರನ್ನು ಆಕರ್ಷಿಸಲು 4 ಲಕ್ಷ ರೂಪಾಯಿ ಮೌಲ್ಯದ ಗೋಲ್ಡನ್ ರೇಜರ್ ಬಳಸುತ್ತಿದ್ದಾರೆ. ಈ ರೇಜರ್ ತಯಾರಿಸಲು ಬರೋಬ್ಬರಿ 80 ಗ್ರಾಂ ಚಿನ್ನ ಬಳಸಲಾಗಿದೆ.
ಕೋರೋನಾ ಕಾರಣದಿಂದ ಸಲೂನ್ ಮುಚ್ಚಿದ ಕಾರಣ ಕ್ಷೌರಿಕರು, ಬ್ಯೂಟಿಷಿಯನ್ ಗಳು, ಕೇಶವಿನ್ಯಾಸಕಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಕೊರೋನಾ ಅನ್ಲಾಕ್ ನಂತರದಲ್ಲಿ ಗ್ರಾಹಕರನ್ನು ಆಕರ್ಷಿಸಲು ಸಲೂನ್ ಮಾಲೀಕರೊಬ್ಬರು ಮಾರ್ಕೆಟಿಂಗ್ ತಂತ್ರ ಅನುಸರಿಸತೊಡಗಿದ್ದಾರೆ.
ಪುಣೆಯ ಸಲೂನ್ ಮಾಲೀಕ ಅವಿನಾಶ್ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ರೇಜರ್ ನಲ್ಲಿ ಶೇವಿಂಗ್ ಮಾಡುತ್ತಾರೆ. ಅನ್ಲಾಕ್ ನಂತರವೂ ಗ್ರಾಹಕರು ಬಾರದ ಕಾರಣ ಚಿನ್ನದ ರೇಜರ್ ಬಳಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಶಾಸಕ ಗೋಪಿಚಂದ್ ಅವರು ವಿನ್ಯಾಸಗೊಂಡ ಸಲೂನ್ ಉದ್ಘಾಟಿಸಿದ್ದಾರೆ.