alex Certify ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್​ ಕಶ್ಯಪ್​ ಸೇರಿದಂತೆ ಹಲವರ ಮನೆ ಮೇಲೆ ಐಟಿ ರೇಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್​ ಕಶ್ಯಪ್​ ಸೇರಿದಂತೆ ಹಲವರ ಮನೆ ಮೇಲೆ ಐಟಿ ರೇಡ್

ತೆರಿಗೆ ವಂಚನೆ ಆರೋಪದ ಅಡಿಯಲ್ಲಿ ಐಟಿ ಅಧಿಕಾರಿಗಳು ಬುಧವಾರ ಬಾಲಿವುಡ್​ ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್​ ಕಶ್ಯಪ್​​, ವಿಕ್ರಮಾದಿತ್ಯ ಮೋಟ್ವಾನೆ, ವಿಕಾಸ್​ ಬಹ್ಲ್​ ಹಾಗೂ ಮಧು ಮಾಂಟೇನಾ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಮುಂಬೈ ಹಾಗೂ ಪುಣೆಯ ಮೂವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ.

ಸಿನಿಮಾ ನಿರ್ಮಾಣ ಸಂಸ್ಥೆ ಫ್ಯಾಂಟಮ್​ ಫಿಲ್ಮ್ಸ್ ಹಾಗೂ ಇವೆಂಟ್ ಮ್ಯಾನೇಜ್​ಮೆಂಟ್​ ಕಂಪನಿಗೆ ಸಂಬಂಧಿಸಿದಂತೆ ಐಟಿ ಇಲಾಖೆ ಬೆಳಗ್ಗೆಯಿಂದ ದಾಖಲೆಗಳನ್ನ ಪರಿಶೀಲಿಸುತ್ತಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಪ್ರೊಡಕ್ಷನ್​ ಹೌಸ್​ ನಿರ್ಮಿಸಿದ ಸಿನಿಮಾಗಳು ಸೂಪರ್​ಹಿಟ್​ ಆಗಿವೆ. ಆದರೆ ತೆರಿಗೆ ವಂಚನೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಕಂಪನಿಯ ಖಾತೆಯಲ್ಲಿರುವ ಹಣಕ್ಕೂ, ಕಂಪನಿಯ ದಾಖಲೆಯಲ್ಲಿ ತೋರಿಸಲಾಗ್ತಿರುವ ಆದಾಯದ ಮೊತ್ತಕ್ಕೂ ವ್ಯತ್ಯಾಸ ಕಂಡು ಬರ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಐಟಿ ದಾಳಿ ವ್ಯಕ್ತಿಗಳ ವಿರುದ್ಧ ನಡೆಸಲಾಗ್ತಿಲ್ಲ. ಆದರೆ ಕಂಪನಿ ಮಾಲೀಕತ್ವಕ್ಕೆ ಸಂಬಂಧಿಸಿರುವವರ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...