ಕೊರೊನಾ ಮಧ್ಯೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿವೆ. ಬೆಲೆ ಏರಿಕೆ ಸೇರಿದಂತೆ ಅನೇಕ ವಿಷ್ಯಗಳು ವಿರೋಧ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಆಹಾರವಾಗಿದೆ. ಇದೇ ವೇಳೆ ಇಳಿಯುತ್ತಿರುವ ಜಿಡಿಪಿಯನ್ನು ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಂಡಿವೆ.
ಈ ಮಧ್ಯೆ ಇಳಿಯುತ್ತಿರುವ ಜಿಡಿಪಿಯನ್ನು ಬೆಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ದಾಡಿಗೆ ಹೋಲಿಕೆ ಮಾಡಲಾಗಿದೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಒಂದು ಮೀಮ್ ಹಂಚಿಕೊಂಡಿದ್ದಾರೆ. ಒಂದರಲ್ಲಿ ಇಳಿಯುತ್ತಿರುವ ಜಿಡಿಪಿ ನಕ್ಷೆ ಹಾಗೂ ಇನ್ನೊಂದರಲ್ಲಿ ಪ್ರಧಾನಿ ಮೋದಿ ಗಡ್ಡದ ಫೋಟೋ ಇದೆ. ಜಿಡಿಪಿ ಇಳಿಯುತ್ತಿದ್ದಂತೆ ಮೋದಿ ಗಡ್ಡ ಬೆಳೆಯುತ್ತಿದೆ ಎಂದು ಬರೆಯಲಾಗಿದೆ.
ಶಶಿ ತರೂರ್ ಹಂಚಿಕೊಂಡಿರುವ ನಕ್ಷೆಯಲ್ಲಿ 2017ರಿಂದ 2019ರ ಜಿಡಿಪಿ ಕೂಡ ಸೇರಿದೆ. ಕೊರೊನಾಗಿಂತಲೂ ಮೊದಲೇ ಡಿಜಿಪಿ ಇಳಿಕೆ ಶುರುವಾಗಿತ್ತು. ಕೊರೊನಾ ಶುರುವಾದ್ಮೇಲೆ ನರೇಂದ್ರ ಮೋದಿ ದಾಡಿ ಬೆಳೆಯುತ್ತಿದೆ. ಇದು ಸಾಕಷ್ಟು ಸುದ್ದಿ ಮಾಡ್ತಿದೆ. ಮೋದಿ, ಟ್ಯಾಗೂರ್ ಲುಕ್ ನೀಡಲು ಬಯಸುತ್ತಿದ್ದು, ಇದೇ ಕಾರಣಕ್ಕೆ ಶೇವ್ ಮಾಡಿಲ್ಲವೆಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.