alex Certify ಕೊರೊನಾ ಹೊತ್ತಲ್ಲೇ ವಿಶ್ವಕ್ಕೆ ಮತ್ತೊಂದು ಶಾಕ್: 100 ವರ್ಷಗಳ ಹಿಂದೆ 5 ಕೋಟಿ ಜನರ ಬಲಿ ಪಡೆದ ಸ್ಪ್ಯಾನಿಷ್ ಜ್ವರ ಮರುಕಳಿಸುವ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೊತ್ತಲ್ಲೇ ವಿಶ್ವಕ್ಕೆ ಮತ್ತೊಂದು ಶಾಕ್: 100 ವರ್ಷಗಳ ಹಿಂದೆ 5 ಕೋಟಿ ಜನರ ಬಲಿ ಪಡೆದ ಸ್ಪ್ಯಾನಿಷ್ ಜ್ವರ ಮರುಕಳಿಸುವ ಆತಂಕ

ಕೊರೊನಾ ಸೋಂಕು ತಡೆಗೆ ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಅಭಿಯಾನ ಮುಂದುವರೆದಿದೆ. ಹೀಗಿರುವಾಗಲೇ ಹೊಸ ಆತಂಕ ಎದುರಾಗಿದೆ. ಸ್ಪ್ಯಾನಿಷ್ ಜ್ವರ ಜಗತ್ತಿಗೆ ಆತಂಕ ತರುವ ಸಾಧ್ಯತೆ ಇದೆ. ನೂರು ವರ್ಷಗಳ ಹಿಂದೆ 5 ಕೋಟಿ ಜೀವಗಳನ್ನು ಬಲಿ ಪಡೆದ ಸ್ಪ್ಯಾನಿಷ್ ಜ್ವರ ಮತ್ತೆ ಮರಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್ ಇನ್ಫ್ಲುಯೆನ್ಸ್ ಕಣ್ಗಾವಲು ಮತ್ತು ಪ್ರತಿಕ್ರಿಯೆ ವ್ಯವಸ್ಥೆಯ ಉನ್ನತ ಸದಸ್ಯ ಡಾ.ಜಾನ್ ಮೆಕ್ಕಾಲಿ ತಿಳಿಸಿದ್ದಾರೆ.

ಸ್ಪ್ಯಾನಿಷ್ ಜ್ವರ ಮತ್ತೆ ಮರಳಬಹುದು. ಸುಮಾರು 100 ವರ್ಷಗಳ ಹಿಂದೆ ಈ ಜ್ವರದಿಂದ 5 ಕೋಟಿ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಮುಂದಿನ ಸಾಂಕ್ರಾಮಿಕ ರೋಗವಾಗಿ ಉಲ್ಬಣವಾಗುವ ಸಾಧ್ಯತೆ ಇದೆಯೆಂದು ಹೇಳಲಾಗಿದೆ.

‘ದಿ ಸನ್’ ಬ್ರಿಟಿಷ್ ಪತ್ರಿಕೆ ವರದಿಯ ಪ್ರಕಾರ, ಸಾಮಾನ್ಯ ಜ್ವರ ವೈರಸ್ ಗೆ ಬದಲಾಗುವ ಮೂಲಕ ಸ್ಪ್ಯಾನಿಷ್ ಜ್ವರ ಮಾರಕವಾಗಲಿದೆ. ವಿಶ್ವ ಸದ್ಯ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿದೆ. ಸ್ಪ್ಯಾನಿಷ್ ಜ್ವರ ಮುಂದಿನ ವೈರಸ್ ರೋಗವಾಗಿ ಬರುವ ಅಪಾಯವಿದೆ. ಭವಿಷ್ಯದ ಸಾಂಕ್ರಾಮಿಕ ರೋಗಗಳಿಗೆ ಮೂಲ ಕಾರಣವಾಗಲಿದೆ ಎಂದು ಮೆಕ್ಕಾಲಿ ಎಚ್ಚರಿಕೆ ನೀಡಿದ್ದಾರೆ.

ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ನಿಯಮಿತವಾಗಿ ಕೈತೊಳೆಯುವ ಮೂಲಕ ಮುನ್ನೆಚ್ಚರಿಕೆಯನ್ನು ಮುಂದುವರೆಸಬೇಕಿದೆ. ಕೊರೊನಾ ನಂತರ ಜಗತ್ತಿನಲ್ಲಿ ವೈರಸ್ ಗಳು ಹೆಚ್ಚು ಅಪಾಯಕಾರಿಯಾಗಲಿವೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಜನರ ರೋಗನಿರೋಧಕ ಶಕ್ತಿ ಕುಸಿಯುತ್ತಿದೆ. ಮುಂದಿನ ಚಳಿಗಾಲದ ವೇಳೆಗೆ ಜ್ವರ ಪ್ರಕರಣಗಳು ತೀವ್ರವಾಗಲಿವೆ ಎಂದು ಹೇಳಲಾಗಿದೆ.

1918 ರಲ್ಲಿ ಸ್ಪ್ಯಾನಿಷ್ ಜ್ವರದಿಂದ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನ ಸೋಂಕಿಗೆ ಒಳಗಾಗಿದ್ದರು. ಸುಮಾರು 5 ಕೋಟಿ ಜನ ಸಾವನ್ನಪ್ಪಿದ್ದರು. ಇದು ಮೊದಲ ಮಹಾಯುದ್ಧದಲ್ಲಿ ಸಂಭವಿಸಿದ ಸಾವುಗಳಿಂದ ಹೆಚ್ಚಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...