ನಾವು ಮಾಡುವ ಕೆಲಸದಲ್ಲಿ ಉತ್ಸಾಹ ಅನ್ನೋದು ಇದ್ದರೆ ವಯಸ್ಸು ಲೆಕ್ಕಕ್ಕೇ ಬರೋದಿಲ್ಲ ಎಂದು ಹೇಳ್ತಾರೆ. ಈ ಮಾತಿಗೆ ಉತ್ತಮ ಉದಾಹರಣೆಯಾಗಿ ನಿಂತಿದ್ದಾರೆ ಮುಂಬೈನ ನಿವಾಸಿ 62 ವರ್ಷದ ರವಿ ಬಾಲಾ ಶರ್ಮಾ. ಈ ವೃದ್ಧೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೃತ್ಯದ ವಿಡಿಯೋಗಳನ್ನ ಹರಿಬಿಡುವ ಮೂಲಕ ಸಖತ್ ಸೌಂಡ್ ಮಾಡ್ತಿದ್ದಾರೆ.
ಶಾಸ್ತ್ರೀಯ ನೃತ್ಯದಿಂದ ಹಿಡಿದು ಬಾಂಗ್ರಾದವರೆಗೆ ಶರ್ಮಾ ಎಲ್ಲಾ ರೀತಿಯ ನೃತ್ಯದ ಪ್ರಕಾರಗಳ ವಿಡಿಯೋವನ್ನೂ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಈ ಕಾರಣದಿಂದಾಗಿಯೇ ನೆಟ್ಟಿಗರು ಶರ್ಮಾರವನ್ನ ಡ್ಯಾನ್ಸಿಂಗ್ ದಾದಿ ಎಂದು ಕರೆಯುತ್ತಿದ್ದಾರೆ.
ಶ್ರದ್ಧೆ, ಸತ್ಯ ಹಾಗೂ ಪ್ರಾಮಾಣಿಕತೆ ನಿಮ್ಮಲ್ಲಿದ್ದರೆ ಸಾಧನೆಯ ಹಾದಿಗೆ ಯಾವುದೂ ಅಡ್ಡಿ ಬರಲಾರದು ಎಂದು ರವಿ ಬಾಲಾ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಶರ್ಮಾ ಬಾಲ್ಯದಿಂದಲೇ ನೃತ್ಯದ ಕಡೆಗೆ ಆಸಕ್ತಿ ಉಳ್ಳವರಾಗಿದ್ದರು. ಆದರೆ ಕುಟುಂಬ ನಿರ್ವಹಣೆ ಹಾಗೂ ವೃತ್ತಿ ಎರಡನ್ನೂ ನಿಭಾಯಿಸಬೇಕಿತ್ತು. ಕಳೆದ 30 ವರ್ಷಗಳಲ್ಲಿ ಶರ್ಮಾಗೆ ಕುಟುಂಬ ಹಾಗೂ ವೃತ್ತಿ ಎರಡೇ ಅವರ ಆದ್ಯತೆಯಾಗಿತ್ತು. ಆದರೆ ಈಗ ನಾನು ಇವೆಲ್ಲದರಿಂದ ನಿವೃತ್ತಿ ಪಡೆದಿದ್ದೇನೆ. ಹೀಗಾಗಿ ನನ್ನ ಆಸಕ್ತಿ ಕಡೆಗೆ ಗಮನಹರಿಸಿದ್ದೇನೆ ಅಂತಾರೆ ಶರ್ಮಾ.
ಶರ್ಮಾ ಬಾಲ್ಯದಲ್ಲಿ ಕಥಕ್ ಅಭ್ಯಾಸ ಮಾಡುತ್ತಿದ್ದರಂತೆ. ಅಲ್ಲದೇ ತಬಲಾ ಹಾಗೂ ಹಾಡು ಹಾಡೋದನ್ನ ತಮ್ಮ ತಂದೆಯಿಂದ ಕಲಿತಿದ್ದಾರೆ. ತಬಲಾ ವಾದನ ಹಾಗೂ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನ ಪಡೆದಿದ್ದಾರೆ. ನಿವೃತ್ತಿ ಬಳಿಕ ಶರ್ಮಾ ಮುಂಬೈಗೆ ಶಿಫ್ಟ್ ಆಗಿದ್ದರು. ಲಾಕ್ಡೌನ್ ಸಮಯದಿಂದ ರವಿ ಬಾಲಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸ್ತಾ ಇರೋದು ಮಾತ್ರವಲ್ಲದೇ ನೆಟ್ಟಿಗರ ಮನ ಗೆಲ್ಲುತ್ತಿದ್ದಾರೆ.
https://www.instagram.com/tv/CER1GCvp03_/?utm_source=ig_embed
https://www.instagram.com/p/CKjHQTmL-Zo/?utm_source=ig_embed
https://www.instagram.com/p/CHppX2PH8hb/?utm_source=ig_embed
https://www.instagram.com/tv/CER1GCvp03_/?utm_source=ig_embed