alex Certify ಬಾಹ್ಯಾಕಾಶದಲ್ಲಿ ನಿರ್ಮಾಣವಾಗುವ ಹೋಟೆಲ್‌ ನಲ್ಲಿ ಏನೆಲ್ಲಾ ಸೌಲಭ್ಯವಿರುತ್ತೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಲ್ಲಿ ನಿರ್ಮಾಣವಾಗುವ ಹೋಟೆಲ್‌ ನಲ್ಲಿ ಏನೆಲ್ಲಾ ಸೌಲಭ್ಯವಿರುತ್ತೆ ಗೊತ್ತಾ….?

ನೀವು ಭೂಮಿಯ ಮೇಲೆ ಹೋಟೆಲ್​ನ್ನು ನೋಡೇ ಇರ್ತಿರಾ….ಅಂಡರ್​ವಾಟರ್​ನಲ್ಲೂ ಹೋಟೆಲ್​ಗಳನ್ನ ನಿರ್ಮಾಣ ಮಾಡೋ ಸಾಹಸವನ್ನ ಈಗಾಗಲೇ ಕೆಲ ಮಂದಿ ಮಾಡಿದ್ದಾರೆ. ಇದೀಗ ಈ ಬಾಹ್ಯಾಕಾಶದಲ್ಲೂ ಹೋಟೆಲ್​ ನಿರ್ಮಾಣವಾಗಲಿದ್ದು 2027ರ ವೇಳೆಗೆ ಲಾಂಚ್ ಆಗಲಿದೆ ಎಂದು ವರದಿಯಾಗಿದೆ.

ವಾಯೇಜರ್​ ಎಂಬ ಹೆಸರಿನ ಬಾಹ್ಯಾಕಾಶ ಹೋಟೆಲ್​ನಲ್ಲಿ 400 ಮಂದಿ ತಂಗಬಹುದಾಗಿದೆ. ಹೋಟೆಲ್​ ರೂಂಗಳ ಜೊತೆಯಲ್ಲಿ ಇಲ್ಲಿ ಬಾರ್, ಸಿನೆಮಾ, ರೆಸ್ಟಾರೆಂಟ್​, ಕಾನ್ಸರ್ಟ್​, ಸ್ಪಾ, ಜಿಮ್​ ಸೇರಿದಂತೆ ಇನ್ನೂ ಹಲವು ಸೌಕರ್ಯಗಳು ಇರಲಿವೆ.

ಆರ್ಬಿಟಲ್​​ ಅಸೆಂಬ್ಲಿ ಕಾರ್ಪೋರೇಷನ್​ ಎಂಬ ಕಂಪನಿ ವಾಯೇಜರ್​ ಬಾಹ್ಯಾಕಾಶ ಹೋಟೆಲ್​​ನ್ನು ನಿರ್ಮಿಸಲು ಪ್ಲಾನ್​ ರೂಪಿಸುತ್ತಿದೆ. 2025ರ ವೇಳೆಗೆ ಹೋಟೆಲ್​ ನಿರ್ಮಾಣ ಆರಂಭಕ್ಕೆ ಕಂಪನಿ ಚಿಂತನೆ ನಡೆಸಿದ್ದು 2027ಕ್ಕೆ ಲೋಕಾರ್ಪಣೆ ಮಾಡುವ ಗುರಿ ಹೊಂದಿದೆ.

ವೆಬ್​ಸೈಟ್​ನಲ್ಲಿರುವ ಮಾಹಿತಿ ಪ್ರಕಾರ ವಾಯೇಜರ್​ ಕ್ಲಾಸ್​ ಬಾಹ್ಯಾಕಾಶ ನಿಲ್ದಾಣವನ್ನ ತಿರುಗುವ ಬಾಹ್ಯಾಕಾಶ​​ ನಿಲ್ದಾಣ ಎಂದು ವರ್ಣಿಸಬಹುದಾಗಿದೆ. ಸರಿಯಾದ ತರಬೇತಿ ಇಲ್ಲದ ಸಾಮಾನ್ಯ ಜನತೆಗೆ ಶೂನ್ಯ ಗುರುತ್ವಾಕರ್ಷಣಾ ಜಾಗದಲ್ಲಿ ಇರೋದು ಕಷ್ಟವಾಗುವ ಕಾರಣ ಇಲ್ಲಿ ಚಂದ್ರನ ಮೇಲ್ಮೈಯಲ್ಲಿರುವ ಗುರುತ್ವಾಕರ್ಷಣದಷ್ಟು ಈ ಹೋಟೆಲ್​ನಲ್ಲೂ ಇರಲಿದೆ. 90 ನಿಮಿಷಗಳಲ್ಲಿ ಈ ಹೋಟೆಲ್​ ಭೂಮಿಯ ಸುತ್ತ ಪ್ರಯಾಣ ಬೆಳೆಸಲಿದೆ.

https://youtu.be/Ao5o3EgQ-sU?t=85

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...