ಪೆಟ್ರೋಲ್ – ಡೀಸೆಲ್ ಬೆಲೆ ಆಕಾಶ ಮುಟ್ಟಿರುವ ಮಧ್ಯೆಯೇ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ 25 ರೂಪಾಯಿ ಹೆಚ್ಚಾಗಿದೆ. ಒಂದಾದ ಮೇಲೆ ಒಂದು ಬೆಲೆ ಬಿಸಿ ಶಾಕ್ ಅನುಭವಿಸಿದ ಜನಸಾಮಾನ್ಯರಿಗೆ ಸಿಎನ್‌ಜಿ, ಪಿಎನ್‌ಜಿ ಬೆಲೆ ಹೆಚ್ಚಳ ಮತ್ತಷ್ಟು ನಿದ್ರೆಗೆಡಿಸಿದೆ.
ದೆಹಲಿ – ಎನ್‌ಸಿಆರ್‌ನಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 70 ಪೈಸೆ ಹೆಚ್ಚಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಪಿಎನ್‌ಜಿಯ ಬೆಲೆ 91 ಪೈಸೆ ಹೆಚ್ಚಾಗಿದೆ. ಬೆಲೆ ಹೆಚ್ಚಳ ಇಂದಿನಿಂದಲೇ ಜಾರಿಗೆ ಬಂದಿದೆ. ಸಿಎನ್‌ಜಿ, ಪಿಎನ್‌ಜಿ ಬೆಲೆ ಹೆಚ್ಚಳದ ಮಧ್ಯೆ ನಿಮಗೆ ಪರಿಹಾರವೊಂದಿದೆ. ಐಜಿಎಲ್ ತನ್ನ ಗ್ರಾಹಕರಿಗೆ ಟ್ವಿಟ್ಟರ್ ನಲ್ಲಿ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ.
ದೇಶೀಯ ಪಿಎನ್‌ಜಿ ಗ್ರಾಹಕರು, ಐಜಿಎಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್ ಬಳಸಬೇಕಾಗುತ್ತದೆ. ಈ ಆ್ಯಪ್ ಮೂಲಕ ಸ್ವಯಂ ಬಿಲ್ಲಿಂಗ್ ಆಯ್ಕೆಯನ್ನು ಆರಿಸಿದರೆ 15 ರೂಪಾಯಿ ಕ್ಯಾಶ್ ಬ್ಯಾಕ್ ಸಿಗುತ್ತದೆ. ಸಿಎನ್‌ಜಿ ಬೆಲೆ ಏರಿಕೆಯಿಂದ ಆತಂಕಗೊಂಡಿರುವ ಗ್ರಾಹಕರಿಗೂ ಐಜಿಎಲ್ ಪರಿಹಾರ ಹೇಳಿದೆ. ಸಿಎನ್ಜಿ ತುಂಬಿಸಲು ಐಜಿಎಲ್ ಸ್ಟೇಷನ್ ಗೆ ನೀವು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಮತ್ತು ಮಧ್ಯಾಹ್ನ 12 ರಿಂದ 6 ರ ಮಧ್ಯೆ ಹೋದಲ್ಲಿ ಪ್ರತಿ ಕೆಜಿಗೆ 50 ಪೈಸೆ ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಕ್ಯಾಶ್ ಬ್ಯಾಕ್ ಪಡೆಯಲು ಐಜಿಎಲ್ ಸ್ಮಾರ್ಟ್ ಕಾರ್ಡ್ ಬಳಸಬೇಕು.