ನವದೆಹಲಿ: ಅಸ್ಸಾಂ ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಇದೀಗ ಸ್ಥಳೀಯ ಮಹಿಳೆಯರ ಜೊತೆ ಚಹಾ ಎಳೆಗಳನ್ನು ಬಿಡಿಸುವುದರಲ್ಲಿ ಮಗ್ನರಾಗಿದ್ದಾರೆ.
ಮಾರ್ಚ್ 27ರಿಂದ ಅಸ್ಸಾಂ ನಲ್ಲಿ ಚುನಾವಣೆ ಆರಂಭವಾಗಲಿದ್ದು, ಎರಡು ದಿನಗಳ ಕಾಲ ಅಸ್ಸಾಂ ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪ್ರಿಯಾಂಕಾ ನಿನ್ನೆ ಸ್ಥಳೀಯ ಮಹಿಳೆಯರ ಜೊತೆ ಡಾನ್ಸ್ ಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಇಂದು ಅಸ್ಸಾಂ ನ ಆದಿವಾಸಿಗಳ ಜೊತೆ ಸಂವಾದ ನಡೆಸಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಕೇಂದ್ರ ಸರ್ಕಾರದಿಂದ ಮತ್ತೊಂದು ಅವಕಾಶ
ಬಳಿಕ ಸಾಧುರು ಟೀ ಗಾರ್ಡನ್ ನಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಟೀ ಚಿಗುರುಗಳನ್ನು ಬಿಡಿಸಿದ್ದಾರೆ. ಬೆನ್ನಿಗೆ ಬುಟ್ಟಿ ಹಾಕಿಕೊಂಡು ಪಕ್ಕಾ ಅಸ್ಸಾಮಿ ಮಹಿಳೆಯರ ಶೈಲಿಯಲ್ಲಿಯೇ ಚಹಾ ಎಲೆಗಳನ್ನು ಬಿಡಿಸಿದ್ದು ವಿಶೇಷವಾಗಿತ್ತು. ಈ ಕುರಿತ ವಿಡಿಯೋವನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದು, ಪ್ರಿಯಾಂಕಾ ಗಾಂಧಿ ಚಹಾ ಎಲೆಗಳನ್ನು ಬಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.