ಅಗ್ಗದ ಬೆಲೆಗೆ ಆಸ್ತಿ ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಅವಕಾಶವನ್ನು ನೀಡ್ತಿದೆ. ಬ್ಯಾಂಕ್, ಆಸ್ತಿ ಹರಾಜು ಹಾಕುತ್ತಿದೆ. ಈ ಮೆಗಾ ಇ-ಹರಾಜು ಮಾರ್ಚ್ 5 ರಿಂದ ಶುರುವಾಗಲಿದೆ. ಎಸ್ಬಿಐ ಹರಾಜು ಮಾಡುವ ಆಸ್ತಿಯಲ್ಲಿ ವಸತಿ, ವಾಣಿಜ್ಯ, ಕೈಗಾರಿಕೆ ಸೇರಿದಂತೆ ವಿವಿಧ ಬಗೆಯ ಆಸ್ತಿಗಳಿವೆ.
ಎಸ್.ಬಿ.ಐ. ಹರಾಜಿಗೆ ಬಂದ ಆಸ್ತಿಯ ಸಂಪೂರ್ಣ ದಾಖಲೆಗಳನ್ನು ಪಾರದರ್ಶಕವಾಗಿಡುತ್ತದೆ. ಎಸ್.ಬಿ.ಐ. ತನ್ನ ಟ್ವಿಟ್ಟರ್ ಪೋಸ್ಟ್ ನಲ್ಲಿ ಅತ್ಯುತ್ತಮವಾದ ಬಿಡ್…! ಕೈಗೆಟುಕುವ ವಸತಿ ಮತ್ತು ವಾಣಿಜ್ಯ ಆಸ್ತಿ, ಭೂಮಿ, ಯಂತ್ರೋಪಕರಣಗಳು, ವಾಹನಗಳು ಮತ್ತು ಇನ್ನೂ ಹೆಚ್ಚಿನದನ್ನು ಖರೀದಿಸುವ ಅವಕಾಶ ಇಲ್ಲಿದೆ. ಎಸ್ಬಿಐ ಮೆಗಾ ಇ-ಹರಾಜಿನಲ್ಲಿ ಭಾಗವಹಿಸಿ ಮತ್ತು ಅತ್ಯುತ್ತಮ ಬಿಡ್ ಮಾಡಿ ಎಂದು ಬರೆದಿದೆ.
ಎಸ್.ಬಿ.ಐ. ಟ್ವಿಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಇ-ಹರಾಜಿನಲ್ಲಿ ಭಾಗವಹಿಸಲು, ಹಣ ಠೇವಣಿ ಮಾಡಬೇಕು. ಇ-ಹರಾಜಿನಲ್ಲಿ ಭಾಗವಹಿಸಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಕೆವೈಸಿಯ ಸಂಪೂರ್ಣ ವಿವರಗಳಿಗಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಮಾನ್ಯ ಡಿಜಿಟಲ್ ಸಹಿ ಅಗತ್ಯವಿರುತ್ತದೆ.
ಹರಾಜಿನಲ್ಲಿ ಭಾಗವಹಿಸಲು ಬಯಸಿದರೆ, ಇ-ಹರಾಜುದಾರರಿಗೆ ಅಥವಾ ಇನ್ನಾವುದೇ ಮಾನ್ಯತೆ ಪಡೆದ ಏಜೆನ್ಸಿಗೆ ಹೋಗಿ ಡಿಜಿಟಲ್ ಸಹಿಯನ್ನು ಪಡೆಯಬಹುದು. ಶಾಖೆಯಲ್ಲಿ ಇಎಮ್ಡಿ ಮತ್ತು ಕೆವೈಸಿ ದಾಖಲೆಗಳನ್ನು ನೀಡಿದ ನಂತರ ಲಾಗಿನ್ ಐಡಿ ಮತ್ತು ಪಾಸ್ವರ್ಡ್,ಇಮೇಲ್ ಐಡಿಗೆ ಕಳುಹಿಸಲಾಗುವುದು. ಅದರ ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು.