ಧಾರವಾಡ: ರಾಜ್ಯದಲ್ಲಿ 6 ರಿಂದ 10 ನೇ ತರಗತಿ ಹಾಗೂ ಪಿಯುಸಿ ತರಗತಿಗಳು ಸೇರಿದಂತೆ ಶಾಲೆ, ಕಾಲೇಜು ಶುರುವಾಗಿವೆ. ಆದರೆ, 1 ರಿಂದ 5 ನೇ ತರಗತಿ ಇನ್ನೂ ಆರಂಭವಾಗಿಲ್ಲ.
ಈ ಬಗ್ಗೆ ಮಾತನಾಡಿದ ಸಚಿವ ಎಸ್. ಸುರೇಶ್ ಕುಮಾರ್ ಅವರು, ಎಲ್ಲವೂ ಸರಿಯಾಗಿದ್ದರೆ ಮಾರ್ಚ್ 1 ರಿಂದಲೇ 1- 5 ನೇ ತರಗತಿಗಳನ್ನು ಆರಂಭಿಸಬಹುದಾಗಿತ್ತು. ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಕೊರೋನಾ ಸೋಂಕು ಪ್ರಕರಣ ತೀವ್ರವಾಗಿ ಏರಿಕೆಯಾಗುತ್ತಿವೆ. ಹೀಗಾಗಿ ಸದ್ಯಕ್ಕೆ 1-5 ನೇ ತರಗತಿ ಆರಂಭಿಸುವುದಿಲ್ಲ ಎಂದು ತಿಳಿಸಿದ್ದಾರೆ.
1 -5 ನೇ ತರಗತಿ ಆರಂಭಿಸಲು ಪೋಷಕರೂ ಮನವಿ ಮಾಡಿದ್ದಾರೆ. ಶಾಲೆಗಳನ್ನು ಆರಂಭಿಸಲು ಎಲ್ಲ ತಯಾರಿಯನ್ನು ಮಾಡಿಕೊಂಡ ನಂತರದಲ್ಲಿ ಇಳಿಮುಖವಾಗುತ್ತಿದ್ದ ಕೊರೊನಾ ಸೋಂಕು ಮತ್ತೆ ಏರುಗತಿಯಲ್ಲಿದೆ. ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 1 -5 ನೇ ತರಗತಿಗಳನ್ನು ಸದ್ಯಕ್ಕೆ ಆರಂಭಿಸುವುದಿಲ್ಲ. ಒಂದು ವಾರದ ನಂತರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.