ಭಾರತದಲ್ಲಿ ಸೋಮವಾರದಿಂದ ಕೋವಿಡ್ 19 ಲಸಿಕೆ ಮೆಗಾ ಡ್ರೈವ್ಗೆ ಚಾಲನೆ ದೊರೆತಿದೆ. ಈ ಅಭಿಯಾನದ ಮೂಲಕ ದೇಶದಲ್ಲಿ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಕೊರೊನಾ ಲಸಿಕೆಯನ್ನ ನೀಡುವ ಉದ್ದೇಶವನ್ನ ಹೊಂದಲಾಗಿದೆ.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯನ್ನ ನೀಡಲಾಗುತ್ತಿದೆ. ಕೋವಿನ್ ಪೋರ್ಟಲ್ ಮೂಲಕ ನೀವು ಲಸಿಕೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಕೊರೊನಾ ಲಸಿಕೆಯನ್ನು ಪಡೆಯುವ ಮುನ್ನ ನೀವು ಕೆಲವು ಅಂಶಗಳನ್ನ ಗಮನದಲ್ಲಿ ಇಡೋದು ಒಳ್ಳೆಯದು.
1. ದೆಹಲಿಯಲ್ಲಿ ಇನ್ನು ಆನ್ ದ ಸ್ಪಾಟ್ ನೋಂದಾವಣಿ ಇರೋದಿಲ್ಲ.
2. ಕೊರೊನಾ ಲಸಿಕೆಗೆ ಪ್ರಸ್ತುತ ಕೋವಿನ್ ಅಪ್ಲಿಕೇಶನ್ ಮೂಲಕವೇ ನೋಂದಣಿ ಮಾಡಲಾಗ್ತಿದೆ.
3. ವಾರದಲ್ಲಿ 6 ದಿನಗಳು ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯುತ್ತದೆ
4. ಮಂಗಳವಾರದಿಂದ ಕೇಂದ್ರ ಆರೋಗ್ಯ ಸಚಿವಾಲಯ ನಿಗದಿಪಡಿಸಿದ ಸಮಯ ಅಂದರೆ ಬೆಳಗ್ಗೆ 9ರಿಂದ ಮಧ್ಯಾಹ್ನ 3ಗಂಟೆವರೆಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಎಲ್ಲಾ ಲಸಿಕೆ ಕೇಂದ್ರಗಳು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಬಂದ್ ಆಗಲಿವೆ.
ಯಾವುದೇ ಫಲಾನುಭವಿ ತನ್ನ ಮೊದಲನೇ ಡೋಸ್ನ ದಿನಾಂಕವನ್ನ ರದ್ದು ಮಾಡಿದ ಅಂದರೆ ಆತನ ಎರಡನೇ ಡೋಸ್ ದಿನಾಂಕವೂ ತಾನಾಗಿಯೇ ರದ್ದಾಗಲಿದೆ.
ಕೋವಿನ್ ನೋಂದಣಿ ಹೊರತುಪಡಿಸಿ ಆನ್ಸೈಟ್ ನೋಂದಣಿ ಎಂಬ ಅವಕಾಶವನ್ನ ನೀಡಲಾಗಿದೆ. ಇದರಲ್ಲಿ ಫಲಾನುಭವಿಗಳು ನೇರವಾಗಿ ಲಸಿಕೆ ಕೇಂದ್ರಗಳಿಗೆ ಹೋಗಿ ತಮ್ಮ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.