2008ರ 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ಖ್ಯಾತಿ ಪಡೆದಿದ್ದ ಮುಖೇಶ್ ಎಂಬಾತ ಬಳಿಕ ವಿದ್ಯಾರ್ಥಿಗಳಿಗೆ ಟ್ಯೂಷನ್ ಆರಂಭಿಸಿದ್ದು, ಇದೀಗ ಸಾರ್ವಜನಿಕರ ಖಾಸಗಿ ಬದುಕಿನ ವಿಡಿಯೋ ಸೆರೆಹಿಡಿದು ಅದನ್ನು ಅಶ್ಲೀಲ ಚಿತ್ರವಾಗಿ ಮಾರ್ಪಡಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ.
ಮಹಾರಾಷ್ಟ್ರದ ಥಾಣೆ ನಿವಾಸಿ 29ವರ್ಷದ ಮುಖೇಶ್ ಗುಪ್ತಾ ಬಂಧಿತ ಆರೋಪಿಯಾಗಿದ್ದು, ಈತ ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವ ವೇಳೆ ಸಾರ್ವಜನಿಕರ ಖಾಸಗಿ ಬದುಕಿನ ವಿಡಿಯೋವನ್ನು ಗುಟ್ಟಾಗಿ ಸೆರೆಹಿಡಿಯುತ್ತಿದ್ದ ಎನ್ನಲಾಗಿದೆ. ಬಳಿಕ ಇದನ್ನು ಅಶ್ಲೀಲ ಚಿತ್ರವಾಗಿ ಮಾರ್ಪಡಿಸಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದ ಎಂದು ತಿಳಿದುಬಂದಿದೆ.
ಫೋಟೋದಿಂದಲೇ ರಾತ್ರೋರಾತ್ರಿ ಫೇಮಸ್ ಆದವರಿವರು…!
ಈ ಕೃತ್ಯದಲ್ಲಿ ಮುಖೇಶ್ ಗುಪ್ತಾನಿಗೆ ಪ್ರಿನ್ಸ್ ಕುಮಾರ್ ಹಾಗೂ ಜಿತೇಂದ್ರ ಗುಪ್ತ ಎಂಬಿಬ್ಬರು ಸಹಕರಿಸಿದ್ದಾರೆನ್ನಲಾಗಿದ್ದು, ಇವರುಗಳೆಲ್ಲರನ್ನೂ ಬಂಧಿಸಿರುವ ಪೊಲೀಸರು ಬಂಧಿತರಿಂದ ಮುನ್ನೂರಕ್ಕೂ ಅಧಿಕ ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ.