ತೈಲಬೆಲೆ ಏರಿಕೆ ಪರಿಣಾಮ ರಾಜ್ಯದಲ್ಲಿ ಗೊಬ್ಬರ ದರ 300 ರೂಪಾಯಿ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಾಣಿಕೆ ವೆಚ್ಚ ಜಾಸ್ತಿಯಾಗಿ ಗೊಬ್ಬರ ಬೆಲೆ ಕೂಡ ಹೆಚ್ಚಳವಾಗಲಿದೆ.
50 ಕೆಜಿ ಪೋಟ್ಯಾಷ್ ಮತ್ತು ಡಿಎಪಿ ದರ 200 ರೂಪಾಯಿಯಿಂದ 300 ರೂ.ನಷ್ಟು ಏರಿಕೆಯಾಗಲಿದೆ. ರಾಜ್ಯದ ಪ್ರಮುಖ ರಸಗೊಬ್ಬರದ ಕಂಪನಿಯಾಗಿರುವ ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ನಿಂದ ದರ ಏರಿಕೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಏಜೆನ್ಸಿಗಳಿಗೆ ಕೂಡ ಮಾಹಿತಿ ನೀಡಲಾಗಿದೆ. ನಾಲ್ಕು ದಿನದಲ್ಲಿ ರಸಗೊಬ್ಬರ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೇರೆ ಕಂಪನಿಗಳು ಕೂಡ ಗೊಬ್ಬರ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಯೂರಿಯಾ, ಡಿಎಪಿ, ಪೊಟ್ಯಾಷ್ ದರ 200 -300 ರೂ. ನಷ್ಟು ಏರಿಕೆಯಾದಲ್ಲಿ ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಹೊರೆಯಾಗಲಿದೆ ಎನ್ನಲಾಗಿದೆ.